ನವದೆಹಲಿ: ಮುಖ್ಯಮಂತ್ರಿ ಹುದ್ದೆ ತನಗೆ ಸಿಗಬೇಕೆಂದು ಪಟ್ಟು ಹಿಡಿದು ಸಿದ್ದರಾಮಯ್ಯಗೆ (Siddaramaiah) ಚೆಕ್‌ಮೇಟ್ ಕೊಟ್ಟಿದ್ದ ʼಕನಕಪುರದ ಬಂಡೆʼ ಒಂದು ಕರೆಯಿಂದ ಕರಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಬುಧವಾರ ಏನಾಯ್ತು?
ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಸಿಎಂ ಆಯ್ಕೆ ಕಸರತ್ತು ನಡೆಯಿತು. ರಾಹುಲ್ ಗಾಂಧಿ (Rahul Gandhi) ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಜೊತೆ ಮೊದಲು ಮಾತನಾಡಿದರು. ಬಳಿಕ ಡಿಕೆ ಶಿವಕುಮಾರ್ (DK Shivakumar) ಜೊತೆ ಸಂಧಾನ ಮಾತುಕತೆ ನಡೆಸಿದರು.
Advertisement
ಈ ಸಂಧಾನ ಮಾತುಕತೆ ಡಿಕೆಶಿ ಒಪ್ಪಿಗೆ ಸೂಚಿಸದೇ ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸಕ್ಕೆ ತೆರಳಿದರು. ಇಲ್ಲಿ ನನಗೆ ಸಿಎಂ ಪಟ್ಟ ನೀಡದೇ ಇದ್ದರೂ ಪರ್ವಾಗಿಲ್ಲ ನೀವು ಸಿಎಂ ಆಗಿ ಎಂದು ಹೊಸ ದಾಳ ಉರುಳಿಸಿ ತೆರಳಿದ್ದರು.
Advertisement
Advertisement
ತಡರಾತ್ರಿ ಏನಾಯ್ತು?
ಒಂದು ಕಡೆ ಸಿದ್ದರಾಮಯ್ಯ ತಂಡ ಇನ್ನೊಂದು ಕಡೆ ಡಿಕೆಶಿ ತಂಡ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಆದೇಶಕ್ಕೆ ಕಾಯುತ್ತಿತ್ತು. ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ನಡೆದ ಹೈಕಮಾಂಡ್ ಸಭೆಗೆ ಮೊದಲು ಸಿದ್ದರಾಮಯ್ಯ ಆಗಮಿಸಿದರು.
Advertisement
ಸಭೆ ನಡೆಯುತ್ತಿದ್ದಾಗಲೇ ಡಿಕೆಶಿ ವೇಣುಗೋಪಾಲ್ ಮನೆಗೆ ಆಗಮಿಸಿದ್ದರೂ ಒಳ ಪ್ರವೇಶ ಮಾಡದೇ ಪಕ್ಕದ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ರಾತ್ರಿ 11 ಗಂಟೆಯ ವೇಳೆಗೆ ಸಿದ್ದರಾಮಯ್ಯ ಕಾರಿನಲ್ಲಿ ನಿರ್ಗಮಿಸುತ್ತಿದ್ದಂತೆ ಡಿಕೆಶಿ ವೇಣುಗೋಪಾಲ್ ಮನೆಯನ್ನು ಪ್ರವೇಶಿಸಿದರು. ಇದನ್ನೂ ಓದಿ: ಸಿಎಂ ಕುರ್ಚಿ ಕದನ ಅಂತ್ಯ – ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ
ಸೋನಿಯಾ ಗಾಂಧಿ ಹೇಳಿದ್ದೇನು?
ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಹೋಗಿದ್ದ ಸೋನಿಯಾ ಗಾಂಧಿ (Sonia Gandhi) ಬುಧವಾರ ದೆಹಲಿಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರವಾಣಿ ಮೂಲಕವೇ ಡಿಕೆಶಿ ಜೊತೆ ತಡರಾತ್ರಿಯೇ ಸೋನಿಯಾ ಮಾತುಕತೆ ನಡೆಸಿದರು.
“2 ವರ್ಷ ಆಗುತಿದ್ದಂತೆ ಸಿದ್ದರಾಮಯ್ಯ ಅವರಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮುಖ್ಯಮಂತ್ರಿಯಾಗಿ ಇದ್ದುಕೊಂಡೇ ಗೌರವದ ವಿದಾಯ ಹೇಳಬೇಕು ಎಂದು ಅವರು ಬಯಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದುಕೊಂಡೇ ರಾಜಕೀಯ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದೇನೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. 2 ವರ್ಷದ ನಂತರ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿರುವ ಹಿನ್ನೆಲೆಯಲ್ಲಿ ಒಪ್ಪಿಕೊಳ್ಳಬೇಕು” ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಸೂತ್ರವನ್ನು ಮಾಡಿದ್ದೇವೆ. ಕೊನೆಯ 3 ವರ್ಷ ಕಳೆದ ನಂತರ ನಿಮ್ಮ ನೇತೃತ್ವದಲ್ಲೇ ಚುನಾವಣೆಗೆ ಕಾಂಗ್ರೆಸ್ ಹೋಗಲಿದೆ. ನಿಮಗೆ ಅವಕಾಶ ಒದಗಿ ಬರಲಿದೆ ಎಂದು ಮನವೊಲಿಕೆ ಮಾಡಿದರು. ಈ ಮಾತಿಗೆ ಕರಗಿದ ʼಕನಕಪುರದ ಬಂಡೆʼ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲು ಒಪ್ಪಿಗೆ ನೀಡಿದರು.