ಮೋಹಕ ತಾರೆ ರಮ್ಯಾ (Ramya) ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಟ್ರೈಲರ್ ಇದೀಗ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಟ್ರೈಲರ್ ರಿಲೀಸ್ ಸಮಾರಂಭ ನಡೆದಿದೆ. ಚಿತ್ರದ ಟ್ರೈಲರ್ ಭಾವನಾತ್ಮಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಅನಿಕೇತ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ (Raj B Shetty), ಪ್ರೇರಣಾ ರೋಲ್‌ನಲ್ಲಿ ಸಿರಿ ರವಿಕುಮಾರ್ (Siri Ravikumar) ಜೀವತುಂಬಿದ್ದು, ಇಡೀ ಟ್ರೈಲರ್ ಎಮೋಷನಲ್ ಆಗಿ ನೋಡುಗರಿಗೆ ಕನೆಕ್ಟ್ ಆಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅನಿಕೇತ್‌ಗೆ ಹೆಲ್ತ್ ಕೌನ್ಸಿಲರ್ ಆಗಿ ಪ್ರೇರಣಾ ಜೊತೆಯಾಗುತ್ತಾರೆ. ಕಥೆಯಲ್ಲಿ ಏನಾಗುತ್ತೆ ಎಂಬುದನ್ನ ಸುಳಿವು ಬಿಟ್ಟು ಕೊಡದೇ ಸಿನಿಮಾ ನೋಡುವಂತೆ ಪ್ರೇರಣೆ ನೀಡಿದೆ ಈ ಟ್ರೈಲರ್. ಭಾವನಾತ್ಮಕವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದೆ ಈ ಟ್ರೈಲರ್.
Advertisement
View this post on Instagram
Advertisement
ರಿಲೀಸ್ ಆಗಿರೋ ಟ್ರೈಲರ್ ನೋಡಿಯೇ ರಾಜ್ ಬಿ ಶೆಟ್ಟಿ, ಸಿರಿ ನಟನೆಗೆ ಫ್ಯಾನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂದೊಳ್ಳೆ ವಿಭಿನ್ನ ಕಥೆಗೆ ನಟಿ ರಮ್ಯಾ ನಿರ್ಮಾಣದ ಮೂಲಕ ಸಾಥ್ ನೀಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದೇ ನವೆಂಬರ್ 24ಕ್ಕೆ ರಿಲೀಸ್ ಆಗ್ತಿದೆ.
Advertisement
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದ ಮೂಲಕ ರಮ್ಯಾ ನಟಿಯಾಗಿ ಮತ್ತೆ ಚಿತ್ರೋದ್ಯಮ ಪ್ರವೇಶಿಸಬೇಕಿತ್ತು. ಮೊದ ಮೊದಲು ಈ ಸಿನಿಮಾಗೆ ರಮ್ಯಾನೆ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಬಳಿಕ ಚಿತ್ರದಿಂದ ಹೊರಬಂದರು. ಈ ಕುರಿತಂತೆ ಮೊನ್ನೆಯಷ್ಟೇ ರಮ್ಯಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದರು. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ಯಶ್ ಪುತ್ರನ ಬರ್ತ್‌ಡೇ
ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್‌ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ಹುಡುಕುತ್ತೇವೆ ಎಂದು ನಟಿ ತಿಳಿಸಿದ್ದರು.
‘ಟೋಬಿ’ ಹೀರೋ ರಾಜ್ ಬಿ ಶೆಟ್ಟಿ ಜೊತೆ ಮೋಹಕ ತಾರೆ ರಮ್ಯಾ (Ramya) ನಟಿಸಬೇಕಿತ್ತು. ಆದರೆ ಈಗ ಅಸಲಿ ಕಾರಣವನ್ನ ತಿಳಿಸುವ ಮೂಲಕ ಗಾಸಿಪ್‌ಗೆಲ್ಲಾ ನಟಿ ಸ್ಪಷ್ಟನೆ ನೀಡಿದ್ದರು. ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಮತ್ತು ಕೆವಿಎನ್ ಸಂಸ್ಥೆಯ ರೂವಾರಿ ಕಾರ್ತಿಕ್-ಯೋಗಿಗೆ, ರಮ್ಯಾ ಧನ್ಯವಾದಗಳನ್ನ ತಿಳಿಸಿದ್ದರು.