ನವದೆಹಲಿ: ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ರಾಂಗ್ ರೂಟಲ್ಲಿ ಕಾರು ಚಲಾಯಿಸಿಕೊಂಡು ಹೋಗಿ ಪೊಲೀಸ್ ಸಿಬ್ಬಂದಿಗೆ ಗುದ್ದಿದ ಘಟನೆ ದೆಹಲಿಯ ಸಿಗ್ನೇಚರ್ ಟವರ್ ಚೌಕ್ ಬಳಿ ಬುಧವಾರ ನಡೆದಿದೆ.
ಸಿಗ್ನೆಚರ್ ಟವರ್ ಚೌಕ್ ಬಳಿ ಎಸ್‍ಯುವಿ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದದನ್ನು ಗಮನಿಸಿದ ಟ್ರಾಫಿಕ್ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಚಾಲಕನ ಬಳಿ ವಾಹನದ ದಾಖಲಾತಿ ತೋರಿಸಲು ಹೇಳಿದ್ದಾರೆ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಲಕ ಕಾರ್ ರಿವರ್ಸ್ ತೆಗೆದುಕೊಂದು ಪರಾರಿಯಾಗಲು ಯತ್ನಿಸಿದ್ದಾನೆ.
Advertisement
Advertisement
ಈ ವೇಳೆ ಅಡ್ಡ ಬಂದ ಪೊಲೀಸ್ ಸಿಬ್ಬಂದಿಗೆ ಕಾರಿನಿಂದ ಗುದ್ದಿದ್ದಾನೆ. ಜೀವ ರಕ್ಷಣೆಗಾಗಿ ತಕ್ಷಣ ಪೊಲೀಸ್ ಸಿಬ್ಬಂದಿ ಕಾರಿನ ಬಾನೆಟ್ ಹಿಡಿದುಕೊಂಡು ಜೋತಾಡಿದರೂ ಆತ ಕಾರನ್ನು ನಿಲ್ಲಿಸದೇ ಸ್ವಲ್ಪ ದೂರ ಸಾಗಿದ್ದಾನೆ. ಬಳಿಕ ಕಾರನ್ನು ನಿಲ್ಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಎಡವಟ್ಟು ಮಾಡಿದರೂ ಆರೋಪಿ ಮಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳದೇ, ಕಾರು ನಿಲ್ಲಿಸಲು ಜಾಗವಿರಲಿಲ್ಲ ಅದಕ್ಕಾಗಿ ವಿರುದ್ಧ ದಿಕ್ಕಿನಲ್ಲಿ ಬಂದೆ ಎಂದು ಸಮರ್ಥಿಸಿಕೊಂಡಿದ್ದಾನೆ. ಘಟನೆ ಬಳಿಕ ಆರೋಪಿಯ ಕಾರನ್ನು ಪೊಲೀಸರು ವಶಕ್ಕೆ ಪಡೆದು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Advertisement
#WATCH: Man stopped by traffic police for driving on the wrong side near Signature Tower Chowk in Gurugram, dragged traffic personnel on the bonnet of his car when the personnel tried to stop him. He was later arrested & the car was also seized. #Haryana (19.12.18) pic.twitter.com/BbyN79ysIW
— ANI (@ANI) December 20, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv