ಮುಂಬೈ: ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ಒಳಗೊಂಡ ಅನೇಕ ಶಸ್ತ್ರಾಸ್ತ್ರಗಳಿದ್ದ ದೋಣಿಯೊಂದು ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಪತ್ತೆ ಆಗಿದೆ.
ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿದ್ದು, ಅದರಲ್ಲಿ ಅನೇಕ ಮದ್ದುಗುಂಡುಗಳು ಹಾಗೂ 3 ಎಕೆ 47 ರೈಫೆಲ್‍ಗಳು ಪತ್ತೆಯಾಗಿವೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದಾರೆ.
Advertisement
Advertisement
ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ರಾಯಗಢ ಜಿಲ್ಲೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ದೋಣಿ ಪತ್ತೆಯಾದ ಸ್ಥಳವು ಮುಂಬೈನಿಂದ 200ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿದ್ದು, ಗಣೇಶ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 26/11 ಮುಂಬೈ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಯೋಜನೆ ಇದು ಎಂದು ಹೇಳಲಾಗಿದೆ. ಇದನ್ನೂ ಓದಿ: ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಬಡಿದಾಡಿಕೊಂಡ ಯುವಕರ ಗುಂಪು
Advertisement
Maharashtra | Security tightened in Raigad district and nearby areas after a suspected boat was found near Harihareshwar Beach. Police investigation underway. pic.twitter.com/UObgOxkB30
— ANI (@ANI) August 18, 2022
Advertisement
ಮೂಲಗಳ ಪ್ರಕಾರ ಈ ಬೋಟ್‍ನ ನೋದಾಯಿತ ಸಂಖ್ಯೆಯು ಇಂಗ್ಲೆಂಡ್ ಸೇರಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಎಟಿಎಸ್ ಮುಖ್ಯಸ್ಥ ವಿನೀತ್ ಅಗರವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಭಯೋತ್ಪಾದನೆಯ ಕೋನದಲ್ಲಿ ತನಿಖೆ ನಡೆಸಲಾಗುವುದು ಎಂದು ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.
ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ. ಈ ಘಟನೆಯು ದೊಡ್ಡ ಹಬ್ಬಕ್ಕೆ ಮುನ್ನಾ ದಿನ ಬಂದಿರುವುದರಿಂದ ಭದ್ರತಾ ಭಯವನ್ನು ಉಂಟುಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ