– ನಮ್ಮ ಮನೆ ಆಧಾರ ಸ್ಥಂಭವೇ ಅಣ್ಣ ಆಗಿದ್ದ
– ಪ್ರತಿದಿನ ಇರುತ್ತಿದ್ದ ಗನ್ ಮ್ಯಾನ್ ಇಂದು ಯಾಕಿಲ್ಲ?
ಬೀದರ್: ಗನ್‌ಮ್ಯಾನ್ ಇಲ್ಲದೇ ಎಟಿಎಂಗೆ (ATM) ಹಣ ಹೇಗೆ ಹಾಕುತ್ತಾರೆ? ಇದು ಪ್ರೀ ಪ್ಲಾನ್ ಮಾಡಿ ಮಾಡಿದ ಕೃತ್ಯವಾಗಿದೆ ಎಂದು ಗುಂಡಿನ ದಾಳಿಯಲ್ಲಿ ಮೃತಪಟ್ಟ ಬ್ಯಾಂಕ್ ಸಿಬ್ಬಂದಿ ಗಿರಿ ವೆಂಕಟೇಶ್ ತಂಗಿ ಮಂಜುಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಬೀದರ್‌ನಲ್ಲಿ (Bidar) ಎಸ್‌ಬಿಐ ಬ್ಯಾಂಕ್ (SBI Bank) ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿ ಹಣ ದೋಚಿ ಪರಾರಿಯಾದ ಪ್ರಕರಣದ ಕುರಿತು ಅವರು ಮಾತನಾಡಿದರು. ನಮ್ಮ ಮನೆ ಆಧಾರ ಸ್ಥಂಭವೇ ನಮ್ಮ ಅಣ್ಣ ಆಗಿದ್ದ. ಇದು ಪ್ರೀ ಪ್ಲಾನ್ ಮಾಡಿ ಮಾಡಿದ ಕೃತ್ಯವಾಗಿದೆ. ಅದು ಡಿಸಿ ಆಫೀಸ್ ಹತ್ತಿರವೇ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ಮಾಡಿ ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವಿಶ್ವದ ಪ್ರತಿ ದೇಶದಲ್ಲೂ ನನ್ನದೊಂದು ಮಗು ಇರಬೇಕು – ಅಮೆರಿಕದ ವೀರ್ಯದಾನಿಯ ಹೆಬ್ಬಯಕೆ
Advertisement
Advertisement
ಗನ್ ಮ್ಯಾನ್ ಇಂದು ಕರ್ತವ್ಯಕ್ಕೆ ಗೈರಾಗಿದ್ದರಾ? ಪ್ರತಿದಿನ ಗನ್‌ಮ್ಯಾನ್ ಇರುತ್ತಿದ್ದ. ಇಂದು ಬಂದಿಲ್ಲ ಎಂದು ಸಿಎಂಎಸ್ ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಸಂಸ್ಥೆಯ ನಿರ್ಲಕ್ಷ್ಯದಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಬ್ರಿಮ್ಸ್ ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವು
Advertisement
ಘಟನೆಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೋರ್ವ ಸಿಬ್ಬಂದಿ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ-ಆಂಧ್ರ ಬಸ್‌ಗಳ ಓವರ್‌ಟೆಕ್ ಪೈಪೋಟಿ – 8ರ ಬಾಲಕಿ ಸಮೇತ ಸೋದರ ಮಾವ ಸಾವು
ಇನ್ನು ಈ ಕುರಿತು ಬೀದರ್ ಎಸ್ಪಿ ಪ್ರದೀಪ್ ಗುಂಟಿ ಮಾತನಾಡಿ, ಎಸ್‌ಬಿಐ ಕಚೇರಿ ಮುಂದೆ ದರೋಡೆ ಮತ್ತು ಮರ್ಡರ್ ಆಗಿದೆ. ಇಬ್ಬರು ಆರೋಪಿಗಳು ಬೈಕ್ ಮೇಲೆ ಬಂದು ದರೋಡೆ ಮಾಡಿದ್ದಾರೆ. ಇಬ್ಬರು ಸಿಬ್ಬಂದಿಗಳು ಎಟಿಎಂಗೆ ಹಣ ತುಂಬುವಾಗ ದಾಳಿ ಮಾಡಿದ್ದಾರೆ. ಈ ವೇಳೆ ಫೈರಿಂಗ್ ಮಾಡಿದ್ದು, ಓರ್ವ ಸಿಬ್ಬಂದಿ ಸಾವಾಗಿದೆ. ಇನ್ನೊಬ್ಬ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ. ಎಟಿಎಂಗೆ ಹಾಕುವ ಹಣದ ಪೆಟ್ಟಿಗೆ ಜೊತೆ ದರೋಡೆ ಮಾಡಿ ಪರಾರಿಯಾಗಿದ್ದಾರೆ. ನಮ್ಮಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಹಣದ ಪೆಟ್ಟಿಗೆ ಹೇಗೆ ಓಪನ್ ಮಾಡಿದ್ದಾರೆ ಗೊತ್ತಿಲ್ಲ. ಇದರಲ್ಲಿ ಹಣ ಎಷ್ಟಿತ್ತು ಎಂದು ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನಂಜನಗೂಡು| ಕಿಡಿಗೇಡಿಗಳಿಂದ ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ
ಪ್ರಕರಣದ ಬಗ್ಗೆ ಪೊಲೀಸರು ಪ್ರತಿಯೊಂದು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಕಲಬುರಗಿ ಡಿಐಜಿ ಅಜಯ್ ಹಿಲ್ಲೋರಿ ಭೇಟಿ ನೀಡಿದ್ದು, ಪರಿಶಿಲನೆ ನಡೆಸುತ್ತಿದ್ದಾರೆ. ಜೊತೆಗೆ ಬ್ಯಾಂಕ್ ಅಧಿಕಾರಿಗಳ ವಿಚಾರಣೆ ಕೂಡ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ