ಬೆಳಗಾವಿ: ತಾಲೂಕಿನ ಸುಳೇಭಾವಿ (Sulebhavi) ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಾರಿಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಿ.ಎನ್. ಬಳಗಣ್ಣವರ, ಆರ್.ಎಸ್. ತಳೇವಾಡ ಎಂಬ ಪೇದೆಗಳನ್ನು ಅಮಾನತು ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ರಣಧೀರ್ ಅಲಿಯಾಸ್ ಮಹೇಶ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದನ್ನೂ ಓದಿ: ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ – ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ
Advertisement
Advertisement
ಇತ್ತ ಸುಳೇಭಾವಿ ಗ್ರಾಮದ ಬೀಟ್ ಪೊಲೀಸರಾಗಿದ್ದ ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದಾರೆ. ಗ್ರಾಮದಲ್ಲಿಯ ಆಗುಹೋಗುಗಳ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸದೇ ಅದನ್ನು ಹತೋಟಿಗೆ ತರಲು ಪ್ರಯತ್ನಿಸಿಲ್ಲ. ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಕಮಿಷನರ್ ಬೋರಲಿಂಗಯ್ಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ