ಯಾದಗಿರಿ: ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯಿಂದ ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶಿಸಲಾಗಿದೆ.
ಯಾದಗಿರಿ ನಗರಸಭೆ (Yadagiri City Council) ವ್ಯಾಪ್ತಿಯ 391 ಸ.ನಂ.ನಲ್ಲಿ ಅಕ್ರಮವೆಸಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಸತತ ವರದಿ ಬಿತ್ತರಿಸಿತ್ತು. ಈ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಧಿಕಾರಿಗಳಿಂದ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡದ ವರದಿಯಲ್ಲಿ ಅಕ್ರಮ ಪರಭಾರೆ ಆರೋಪ ಸಾಬೀತಾಗಿರೋದ್ರಿಂದ 8 ಜನ ಅಧಿಕಾರಿಗಳನ್ನ ಅಮಾನತು ಮಾಡಿ ಪೌರಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
Advertisement
Advertisement
ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪೌರಾಯುಕ್ತ ಶರಣಪ್ಪ, ಕಂದಾಯ ಅಧಿಕಾರಿ ವಿಶ್ವಪ್ರತಾಪ ಅಲೆಕ್ಸಾಂಡರ್, ಎಇಇ ರಾಕೇಶರಡ್ಡಿ, ಸಿಬ್ಬಂದಿ ಸುರೇಶ ವಿಭೂತೆ, ಪದ್ಮಾವತಿ, ರಿಯಾಜುದ್ದೀನ್, ಲಿಂಗಾರಡ್ಡಿ ಹಾಗೂ ಪುಷ್ಪಾವತಿ ಇವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಕನ್ನಡಿಗರಿಗೆ ಫ್ರಂಟ್ ಡೆಸ್ಕ್ ಉದ್ಯೋಗ ಕೊಡಿ: ಜಗ್ಗೇಶ್ ಒತ್ತಾಯ
Advertisement
Advertisement