ಬೆಂಗಳೂರು: ಕರ್ನಾಟಕ (Karnataka) ಸೇರಿದಂತೆ ದೇಶಾದ್ಯಂತ 15 ರಾಜ್ಯಗಳಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ 93 ಕಡೆ ಎನ್‌ಐಎ (NIA), ಇಡಿ ದಾಳಿ ನಡೆಸಿದ್ದು, ರಾಜ್ಯದ ಪೊಲೀಸರ (Karnataka Police) ನೆರವಿನೊಂದಿಗೆ ಪಿಎಫ್‌ಐ (PFI) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ 110ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದೆ.
ಎನ್‌ಐಎ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಮೋಸ್ಟ್ ವಾಂಟೆಡ್ (Most Wanted) ಶಂಕಿತ ಉಗ್ರ ಯಾಸಿರ್ ಅರಾಫತ್ ನನ್ನೂ ಬಂಧಿಸಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ
Advertisement
Advertisement
ಹೇಗಿತ್ತು ಆಪರೇಷನ್?
ಬರೋಬ್ಬರಿ 200ಕ್ಕೂ ಹೆಚ್ಚು ಪೊಲೀಸ್ (Police) ಅಧಿಕಾರಿಗಳ ಪಡೆ ಆರ್.ಟಿ.ನಗರದ ಭೀಮಣ್ಣ ಗಾರ್ಡನ್ 4ನೇ ಕ್ರಾಸ್‌ನಲ್ಲಿ ಸುತ್ತುವರಿದಿತ್ತು. ಶಂಕಿತ ಉಗ್ರ ಯಾಸಿರ್ ಗಾಢ ನಿದ್ರೆಯಲ್ಲಿದ್ದಾಗ ಮನೆಗೆ ನುಗ್ಗಿದ ಎನ್‌ಐಎ ಟೀಂ ಸತತ 2 ಗಂಟೆ ಕಾರ್ಯಚರಣೆ ನಡೆಸಿ ಮುಂಜಾನೆ 3 ಗಂಟೆ ವೇಳೆಗೆ ಶಂಕಿತ ಯಾಸಿರ್‌ನನ್ನು ಬಂಧಿಸಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ
Advertisement
Advertisement
ಬೆಂಗಳೂರಿನಲ್ಲಿ ಅಡಗಿದ್ದ ಶಂಕಿತ ಉಗ್ರ 5 ವರ್ಷಗಳಿಂದ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದ. ಹಣ (Money) ಪಡೆದು ಐಸಿಸ್‌ಗೆ ಯುವಕರನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ರವಾನೆ ಮಾಡ್ತಿದ್ದ. ಕಳೆದ 5 ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ವಿದೇಶದಿಂದ ಸಾಕಷ್ಟು ಹಣ ಈತನ ಖಾತೆಗೆ ಜಮೆಯಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಯಾಸಿರ್ ಮೇಲಿನ ಆರೋಪಗಳೇನು?
- ವಿದೇಶಗಳಿಂದ ಪಿಎಫ್‌ಐ ಸಂಘಟನೆಗೆ ಹಣ,
- ಈ ಹಣ ಬಳಸಿಕೊಂಡು ಯುವಕರನ್ನು ಪಿಎಫ್‌ಐಗೆ ಆಕರ್ಷಣೆ
- ಕರ್ನಾಟಕ, ಕೇರಳ, ತಮಿಳುನಾಡು, ದೆಹಲಿಯಲ್ಲಿ ಉಗ್ರ ದಾಳಿಗೆ ಸಂಚು
- ಐಸಿಸ್ ರೀತಿಯಲ್ಲಿ ಯುವಕರಿಗೆ ಟ್ರೈನಿಂಗ್
- ಟ್ರೈನಿಂಗ್ ಪಡೆದ ಬಳಿಕ ಯುವಕರನ್ನು ದಾಳಿಗೆ ಬಿಡೋ ಉದ್ದೇಶ
- ಆಯುಧಗಳ ಮೂಲಕ ಸಾರ್ವಜನಿಕರ ಮೇಲೆ ದಾಳಿ ಟಾರ್ಗೆಟ್
- ಗುಂಪು ಮಾಡಿಕೊಂಡು ಕೋಮುದಳ್ಳುರಿಗೆ ಪ್ಲ್ಯಾನ್
- ಸಾಮಾಜಿಕ ಜಾಲತಾಣದ ಮೂಲಕ ಕೋಮು ದ್ವೇಷಕ್ಕೆ ಕುಮ್ಮಕ್ಕು