ಬೆಂಗಳೂರು: ನಗರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರ ಬಾಳಲ್ಲಿ ಅಲ್ ಖೈದಾ ಸೇರ್ಪಡೆಗೊಳಿಸುವವರು ದೊಡ್ಡ ಆಟವನ್ನೇ ಆಡಿದ್ದಾರೆ. ಪವಿತ್ರ ಕುರಾನ್ ಗ್ರಂಥವನ್ನೇ ತಿರುಚಿರುವ ಉಗ್ರರು ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರಚೋದನೆಗೆ ಒಳಗಾಗುವಂತೆ ಮಾಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಶಂಕಿತರ ಮೊಬೈಲ್ ರಿಟ್ರೀವ್ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ಗೆ ರವಾನಿಸಲಾಗಿದೆ. ಹಳೆ ಮೊಬೈಲ್ ಆದ ಕಾರಣ ರಿಟ್ರೀವ್ ಆಗದೆ ಮಾಹಿತಿ ಪತ್ತೆ ಆಗ್ತಿಲ್ಲ. ಹೀಗಾಗಿ ವಿಚಾರಣೆಗೆ ಅಡ್ಡಿಯುಂಟಾಗಿದೆ. ಪ್ರಕರಣ ಎನ್‍ಐಎಗೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಪೊಲೀಸರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್?
ಶಂಕಿತರಿಗೆ ಉಗ್ರ ಪ್ರಚೋದನೆ ಹೇಗಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಧರ್ಮಗ್ರಂಥಗಳ ಬಗ್ಗೆ ಅರಿವಿರದ ಯುವಕರಿಗೆ ಕುರಾನ್‍ನ ತಿರುಚಿದ ಪ್ರತಿ ನೀಡಿ ಪ್ರಚೋದನೆ ನೀಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳ ಬಳಿ ತಿರುಚಿದ ಕುರಾನ್‍ನ ಕೆಲ ಪೇಜ್‍ಗಳು ಪತ್ತೆಯಾಗಿವೆ. ಅಲ್ ಖೈದಾಗೆ ಸೇರ್ಪಡೆ ಮಾಡುವಾತ ಕಳುಹಿಸಿರುವ ದಾಖಲೆಗಳಿದ್ದು, ಜಿಹಾದ್, ಕೊಲ್ಲುವುದು, ಷರಿಯತ್ ಕಾನೂನು ಎಲ್ಲವನ್ನು ಸೇರಿಸಲಾಗಿದೆ. ಪವಿತ್ರ ಗ್ರಂಥವನ್ನು ತಿರುಚಿದನ್ನೇ ಕುರಾನ್ ಎಂದು ನಂಬಿರುವ ಶಂಕಿತರು, ಕುರಾನ್ ಅನ್ವಯವಾಗಿ ಬದುಕಬೇಕು. ಅಲ್ಲಾನಿಗೋಸ್ಕರ ಜಿಹಾದ್ ಮಾಡಬೇಕು ಎಂಬುದನ್ನು ನಂಬಿದ್ದಾರೆ. ಇದರ ಪ್ರಭಾವಕ್ಕೆ ಒಳಗಾಗಿ ಅಲ್ ಖೈದಾ ಸೇರಬೇಕು ಎಂಬುದು ನೇಮಕಾತಿ ಮಾಡಿಕೊಂಡಿದ್ದವನ ಸಂಚಾಗಿತ್ತು ಎಂಬ ಸತ್ಯ ಬಯಲಾಗಿದೆ. ಇದನ್ನೂ ಓದಿ: 6 ವರ್ಷ ತುಂಬಿದರಷ್ಟೇ 1ನೇ ಕ್ಲಾಸ್‌ಗೆ ಪ್ರವೇಶ – ಗೊಂದಲಕ್ಕೆ ಕಾರಣವಾದ ಆದೇಶ