ಜೈಲಲ್ಲಿದ್ದುಕೊಂಡೇ ಹಿಂದೂಗಳ ಮತಾಂತರ- ನಜೀರ್ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಹಿರಂಗ

Public TV
1 Min Read
BENGALURU TERROR NAZEER

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಂಕಿತ ಉಗ್ರರ ಬಂಧನ (Suspected Terrorist Arrest) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ. ಈ ಮೂಲಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ (LET) ಉಗ್ರ ನಜೀರ್ ನದ್ದೇ ಹವಾ ಎನ್ನುವಂತಾಗಿದೆ.

ಹೌದು. ಬಂಧಿತ ನಜೀರ್ ವಿಚಾರಣೆ ವೇಳೆ ಸ್ಫೋಟಕ ಸತ್ಯವೊಂದು ಬಹಿರಂಗವಾಗಿದೆ. ಜೈಲಲ್ಲಿದ್ದುಕೊಂಡೇ ಈತ 30ಕ್ಕೂ ಹೆಚ್ಚು ಹಿಂದೂಗಳ ಮತಾಂತರ ಮಾಡುತ್ತಿದ್ದನು. ಬಡ ಅಮಾಯಕ ಹಿಂದೂ ಹುಡುಗರನ್ನು ಈತ ಕನ್ವರ್ಟ್ ಮಾಡುತ್ತಿದ್ದ. ಮೀಸೆ ಬೋಳಿಸಿ, ಗಡ್ಡ ಬಿಟ್ಟುಕೊಂಡಿರುವ ವಿಚಾರಣಾಧೀನ ಕೈದಿಗಳು ಬಂದರೆ ಎಂಟ್ರಿ ಹಾಕಿಸಿಕೊಳ್ಳುತ್ತಿದ್ದ. ಅಲ್ಲದೆ ಉಗ್ರರಿಗೆ ನಿಗದಿಯಾಗಿರೋ ಹೈಸೆಕ್ಯುರಿಟಿ ಸೆಲ್‍ನಲ್ಲೇ ಇರಿಸಿಕೊಳ್ಳುತ್ತಿದ್ದ. ಇದಕ್ಕಾಗಿ 70,000 ದವರೆಗೆ ನಜೀರ್ (Nazeer) ಹಣ ಚಾರ್ಜ್ ಮಾಡುತ್ತಿದ್ದ. ಆದರೆ ಜೈಲು ಸಿಬ್ಬಂದಿ ಮಾತ್ರ ನಜೀರ್ ನ ದುಷ್ಕೃತ್ಯವನ್ನು ಕಂಡೂ ಕಾಣದಂತಿದ್ದರು ಎಂಬ ಸಂಗತಿಯೊಂದು ವಿಚಾರಣೆ ವೇಳೆ ಹೊರಬಿದ್ದಿರುವ ಮಾಹಿತಿ ಲಭ್ಯವಾಗಿದೆ.

ಸಜೀವ ಗುಂಡುಗಳು ಪತ್ತೆ: ಎ5 ಆರೋಪಿಯ ಮನೆಯಲ್ಲಿ ಹ್ಯಾಂಡ್ ಗ್ರೇನೆಡ್ ಪತ್ತೆಯಾಗಿದೆ. ತಬ್ರೇಜ್ ಮನೆಯಲ್ಲಿ 4 ಜೀವಂತ ಗ್ರೇನೆಡ್ ಪತ್ತೆಯಾಗಿದೆ. ಅಲ್ಲದೇ ಮಿಲಿಟರಿ ಪೊಲೀಸವರು ಬಳಸುವ 45 ಸಜೀವ ಗುಂಡುಗಳನ್ನ ಸಿಸಿಬಿ ಪೊಲೀಸರು (CCB Police) ಪತ್ತೆ ಮಾಡಿದ್ದಾರೆ. 303 ಹಾಗೂ 9ಎಂಎಂನ ಸಜೀವ ಗುಂಡುಗಳು ಪತ್ತೆಯಾಗಿದ್ದು, ಸದ್ಯ ಪೊಲೀಸರಿಗೆ ಲೈವ್ ಬುಲೆಟ್‍ಗಳು ಶಂಕಿತ ಉಗ್ರರ ಕೈಸೇರಿದ್ದು ಹೇಗೆ ಎಂಬ ಹೊಸ ತಲೆನೋವು ಶುರುವಾದಂತಿದೆ. ಇದನ್ನೂ ಓದಿ: ಶಂಕಿತ ಉಗ್ರರು ಬೆಂಗ್ಳೂರಲ್ಲೇ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳು ಪತ್ತೆ

9ಎಂಎಂನ ಸಜೀವ ಗುಂಡುಗಳು ಪೊಲೀಸರಿಗೆ ಮಾತ್ರ ಸೀಮಿತವಾಗಿವೆ. ಇವುಗಳನ್ನು ಬಿಎಸ್‍ಎಫ್, ಐಟಿಬಿಪಿ ಅರೆಸೇನಾ ಪಡೆಗಳು ಮಾತ್ರ ಬಳಸುತ್ತಾರೆ. ಹೀಗಾಗಿ ಬುಲೆಟ್‍ಗಳು ಶಂಕಿತರ ಕೈ ಸೇರಿದ ಬಗ್ಗೆ ಅನುಮಾನ ಹೆಚ್ಚಾಗಿದೆ. ಮಾವೋವಾದಿಗಳು- ಪೊಲೀಸ್ ಸಂಘರ್ಷದಲ್ಲಿ ಕಳುವಾಗಿದ್ದಾ ಎಂಬ ಪ್ರಶ್ನೆ ಎದಿದ್ದು, ಈ ಎಲ್ಲಾ ಮೂಲಗಳಿಂದಲೂ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Web Stories

Share This Article