ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷವಾಗಿದ್ದು, ಶಂಕಿತರನ್ನು ಬಂಧಿಸಲು ನಕ್ಸಲ್ ನಿಗ್ರಹ ದಳ (ಎಎನ್‍ಎಫ್) ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.
ಜಿಲ್ಲೆಯ ಸುಳ್ಯ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರು ಇರುವ ಮಾಹಿತಿ ಲಭ್ಯವಾಗಿದ್ದು, ಎಎನ್ಎಫ್ ಸುಪರಿಟೆಂಡೆಂಟ್ ಪೊಲೀಸ್ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ 32 ಜನ ಸಿಬ್ಬಂದಿ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಶುಕ್ರವಾರ ತಡರಾತ್ರಿ ಬಂದೂಕುಧಾರಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನಿದ್ದ ಶಂಕಿತ ನಕ್ಸಲರ ಗುಂಪೊಂದು ಸುಳ್ಯ ತಾಲೂಕಿನ ಮಡಪ್ಪಾಡಿ ಕಾಣಿಸಿಕೊಂಡಿತ್ತು. ಶಂಕಿತ ನಕ್ಸಲರು ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಹಾಡಿಕಲ್ ಜಯರಾಮ್ ಗೌಡಗೆ ಸೇರಿದ್ದ ಮಡಪ್ಪಾಡಿ ರಬ್ಬರ್ ಕಾರ್ಮಿಕರ ಶೆಡ್ ಗೆ ನುಗ್ಗಿ ಅಲ್ಲಿಯೇ ಊಟ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.