ಹೈದರಬಾದ್: ವಿದೇಶದಿಂದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಗೆ ಮರಳಿದ 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಾಯಿಲೆಯ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ.
ಮಂಕಿಪಾಕ್ಸ್ ಕಾಯಿಲೆಯ ರೋಗ ಲಕ್ಷಣವನ್ನು ಹೊಂದಿರುವ ವ್ಯಕ್ತಿ ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ ನಿವಾಸಿಯಾಗಿದ್ದು, ಜುಲೈ 6 ರಂದು ಕುವೈತ್‍ನಿಂದ ಆಗಮಿಸಿದ್ದರು. ಜುಲೈ 20 ರಂದು ಜ್ವರ ಕಾಣಿಸಿಕೊಂಡಿದ್ದು, ಜುಲೈ 23 ರಂದು ದದ್ದು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯನ್ನು ಕಾಮರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ.ಶ್ರೀನಿವಾಸ ರಾವ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೂ ತಲುಪಿದ ಮಂಕಿಪಾಕ್ಸ್ – ವಿದೇಶ ಪ್ರಯಾಣದ ದಾಖಲೆಯೇ ಇಲ್ಲದ ವ್ಯಕ್ತಿಗೆ ಸೋಂಕು
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಂಕಿಪಾಕ್ಸ್ ಕಾಯಿಲೆ ರೋಗ ಲಕ್ಷಣ ಹೊಂದಿರುವ ವ್ಯಕ್ತಿಯನ್ನು ಕಾಮರೆಡ್ಡಿ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಫಲಿತಾಂಶ ಬರುವವರೆಗೂ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈ ವ್ಯಕ್ತಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದ 6 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಹೀಗಿದ್ದರೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ
Advertisement
Advertisement
ಭಾನುವಾರ ದೆಹಲಿಯಲ್ಲಿ ಮಂಕಿಪಾಕ್ಸ್ ವೈರಸ್‍ನ ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಆದರೆ ವ್ಯಕ್ತಿ ಯಾವುದೇ ಟ್ರಾವೆಲ್ ಹಿಸ್ಟರಿಯನ್ನು ಹೊಂದಿಲ್ಲ. 31 ವರ್ಷದ ವ್ಯಕ್ತಿ ಜ್ವರ ಹಾಗೂ ಚರ್ಮದಲ್ಲಿ ಕಂಡು ಬಂದ ಗುಳ್ಳೆಗಳಿಂದ ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಅಲ್ಲಿ ಆತನಿಗೆ ಮಂಕಿಪಾಕ್ಸ್ ಇರುವುದು ಕಂಡುಬಂದಿದೆ. ಆತ ಇತ್ತೀಚೆಗೆ ಹಿಮಾಚಲ ಪ್ರದೇಶದಿಂದ ಹಿಂದಿರುಗಿದ್ದ ಎನ್ನಲಾಗಿದೆ.