ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸುದ್ದಿ ಅಂದ್ರೆ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಡೇಟಿಂಗ್ ವಿಚಾರ. ಮದುವೆನೂ ಇಲ್ಲ, ರಿಂಗೂ ಇಲ್ಲ ಅಂತಾ ಡೇಟಿಂಗ್ ವಿಚಾರಕ್ಕೆ ಸುಶ್ಮಿತಾ ಸೇನ್ ಕ್ಲ್ಯಾರಿಟಿ ಕೊಟ್ರು ಟ್ರೋಲಿಗರು ನಟಿಯನ್ನ ಟ್ರೋಲ್ ಮಾಡುವುದನ್ನ ಬಿಟ್ಟಿಲ್ಲ. ಹಾಗಾಗಿ ಟ್ರೋಲಿಗರಿಗೆ ಸುಶ್ಮಿತಾ ಸೇನ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವ ವಿಚಾರ ಅಂದ್ರೆ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಡೇಟಿಂಗ್ ವಿಚಾರ. ಇವರಿಬ್ಬರ ವಯಸ್ಸಿನ ಬಗ್ಗೆ, ಡೇಟಿಂಗ್ ಕುರಿತು ನಟಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಟ್ರೋಲಿಗರ ವಿರುದ್ಧ ಈಗ ನಟಿ ಫುಲ್ ಗರಂ ಆಗಿದ್ದಾರೆ. ಲಲಿತ್ ಮೋದಿ ಆಗರ್ಭ ಶ್ರೀಮಂತ ಸಾವಿರಾರು ಕೋಟಿಯ ಒಡೆಯ ಹಾಗಾಗಿ ಸುಶ್ಮಿತಾ ಅವರ ಜತೆ ಇದ್ದಾರೆ ಎಂದು ಸಖತ್ ಚರ್ಚೆ ಆಗುತ್ತಿರೋ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಟಿ ಸ್ಪಷ್ಟನೆ ನೀಡಿದ್ದಾರೆ.
ಲಲಿತ್ ಮೋದಿ ಚಿನ್ನದ ಗಂಟು ಎಂಬರ್ಥದಲ್ಲಿ ಚಿನ್ನದ ಹಿಂದೆ ಬಿದ್ದಿದ್ದಾರೆ ಎಂದು ಸುಶ್ಮಿತಾರನ್ನ ಟ್ರೋಲ್ ಮಾಡುತ್ತಿದ್ದು, ಇದಕ್ಕೆ ನಟಿ ಖಡಕ್ ಉತ್ತ ನೀಡಿದ್ದಾರೆ. ನಾನು ಚಿನ್ನಕ್ಕಿಂತ ಆಳವಾಗಿ ಅಗೆಯುತ್ತೇನೆ. ನಾನು ಯಾವಾಗಲೂ ವಜ್ರಗಳಿಗೆ ಆಧ್ಯತೆ ನೀಡುತ್ತೇನೆ. ಇನ್ನೂ ಅವುಗಳನ್ನು ನಾನೇ ಖರೀದಿಸುತ್ತೇನೆ. ನಿಮ್ಮ ಸುಶ್ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದೂ ಪೋಸ್ಟ್ ಮಾಡಿ, ಎಲ್ಲಾ ಗಾಸಿಪ್‌ಗೂ ನಟಿ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಗೆಳತಿಯ ಜೊತೆ ‘ಲಿಪ್ ಲಾಕ್’ ಮಾಡಿಕೊಂಡ ನಟಿ ನಿಶ್ವಿಕಾ ನಾಯ್ಡು
ಸುಶ್ಮಿತಾ ಸೇನ್ ಪೋಸ್ಟ್ಗೆ ಬೆಂಬಲವಾಗಿ ಪ್ರಿಯಾಂಕ ಚೋಪ್ರಾ, ರಣ್‌ವೀರ್ ಸಿಂಗ್, ಸುನೀಲ್ ಶೆಟ್ಟಿ, ನೇಹಾ ಧೂಫಿಯಾ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿ ಸುಶ್ಮಿತಾ ನಡೆಗೆ ಸಾಥ್ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]