ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರ ನಿನ್ನೆಯಿಂದ ಭಾರೀ ಸದ್ದು ಮಾಡುತ್ತಿದೆ. ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನು ಲಲಿತ್ ಮೋದಿ ಹಂಚಿಕೊಳ್ಳುತ್ತಿದ್ದಂತೆಯೇ ಫೋಟೋಗಳು ಸಖತ್ ವೈರಲ್ ಆದವು. ಇಬ್ಬರ ವಯಸ್ಸಿನ ಅಂತರ ಮತ್ತು ಸುಶ್ಮಿತಾ ಅವರ ಮಾಜಿ ಬಾಯ್ ಫ್ರೆಂಡ್ ಕುರಿತಾಗಿಯೂ ಟ್ರೋಲ್ ಮಾಡಲಾಯಿತು. ಈ ಫೋಟೋಗಳಿಗೆ ಸುಶ್ಮಿತಾ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಕೂಡ ಹೆಚ್ಚಾಯಿತು.
Advertisement
ಈ ಕುರಿತಂತೆ ರೋಹ್ಮನ್ ಶಾಲ್ ಕೊನೆಗೂ ಬಾಯ್ಬಿಟ್ಟಿದ್ದಾರೆ. ಸುಶ್ಮಿತಾ ಆಯ್ಕೆ ಯಾವಾಗಲೂ ಸರಿಯಾಗಿ ಇರುತ್ತದೆ. ಅವರು ಎಲ್ಲಿ ಖುಷಿಯಾಗಿ ಇರುತ್ತಾರೋ, ಅಲ್ಲಿ ಖುಷಿ ಪಡಲಿ. ಅವರು ಯಾರಿಗೂ ಕೇಡನ್ನು ಬಯಸಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ. ಹಾಗಾಗಿ ಈ ಕುರಿತು ನಾನು ನೆಗೆಟಿವ್ ಕಾಮೆಂಟ್ ಮಾಡಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
Advertisement
Advertisement
ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದರೂ, ಸುಶ್ಮಿತಾ ಸೇನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಲಿತಾ ಮೋದಿ ಕುರಿತು ಯಾವುದೇ ಕಾಮೆಂಟ್ ಕೂಡ ಮಾಡಿಲ್ಲ. ಆದರೆ, ಇದು ಹೇಗೆ ಸಾಧ್ಯ ಎಂಬ ಪ್ರತಿಕ್ರಿಯೆಗಳು ಮಾತ್ರ ಜೋರಾಗಿ ಕೇಳಿ ಬರುತ್ತಿವೆ. ಜೊತೆಗೆ ಇಬ್ಬರ ಆಸ್ತಿಗಳ ಬಗ್ಗೆಯೂ ಸುದ್ದಿ ಆಗುತ್ತಿದೆ. ಮೋದಿ ಮತ್ತು ಸುಶ್ಮಿತಾ ಹೇಗೆ ಪರಿಚಯವಾದರು, ಪ್ರೇಮ ಹೇಗೆ ಬೆಳೆಯಿತು ಎನ್ನುವ ಕುರಿತು ಪ್ರಶ್ನೆಗಳು ಎದ್ದಿವೆ.