ತಲೆ ಬೋಳಿಸಿಕೊಳ್ಳುವ ಚಾಲೆಂಜ್ ಮಾಡಿದ್ದರು ಸುಷ್ಮಾ ಸ್ವರಾಜ್

Public TV
1 Min Read
sonia gandhi sushma swaraj

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದ್ದು, ದೇಶ ಕಂಡ ಅಪರೂಪದ ನಾಯಕಿಯನ್ನು ಕಳೆದುಕೊಂಡಿದ್ದೇವೆ ಎಂದು ರಾಷ್ಟ್ರ ನಾಯಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ರಾಜಕೀಯ ಬೆಳವಣಿಗೆ ಸೇರಿದಂತೆ ಅವರು ನಾಯಕಿಯಾಗಿ ಕೈಗೊಂಡಿದ್ದ ಕೆಲ ನಡೆಗಳನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ 2004 ರಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧವೇ ಸುಷ್ಮಾ ಅವರು ಸವಾಲು ಎಸೆದಿದ್ದರು.

sushma swaraj

2004 ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ ರಚನೆ ಮಾಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಳ್ಳಲು ಸಿದ್ಧತೆ ನಡೆಸಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರನ್ನ ಪ್ರಧಾನಿಯಾಗಿ ಮಾಡುವ ನಿರ್ಣಯವೂ ಕೂಡ ಆಗಿತ್ತು. ಆದರೆ ಅಂದು ಸೋನಿಯಾ ಅವರು ವಿದೇಶಿ ಮೂಲದ ಮಹಿಳೆ ಆಗಿದ್ದರಿಂದ ಇದನ್ನು ಸುಷ್ಮಾ ಸ್ವರಾಜ್ ಅವರು ಬಲವಾಗಿ ವಿರೋಧಿಸಿದ್ದರು.

ಸೋನಿಯಾ ಗಾಂಧಿ ಅವರು ಪ್ರಧಾನಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದಂತೆಯೇ ಅವರ ವಿರುದ್ಧವೇ ಸವಾಲು ಎಸೆದಿದ್ದ ಸುಷ್ಮಾ ಸ್ವರಾಜ್ ಅವರು, ಇಟಲಿ ಮೂಲದ ಸೋನಿಯಾ ಗಾಂಧಿ ಅವರು ಏನಾದರೂ ದೇಶದ ಪ್ರಧಾನಿ ಆದರೆ ತಲೆ ಬೋಳಿಸಿಕೊಂಡು, ಬಿಳಿ ಸೀರೆ ಉಟ್ಟು, ಧಾನ್ಯಗಳನ್ನು ತಿಂದು ಜೀವನ ನಡೆಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು.

sushma

ಸುಷ್ಮಾ ಸ್ವರಾಜ್ ಅವರ ಈ ಹೇಳಿಕೆ ದೇಶ್ಯಾದ್ಯಂತ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಆದರೆ ಆ ಬಳಿಕ ಸೋನಿಯಾ ಅವರು ಪ್ರಧಾನಿ ಹುದ್ದೆಯಿಂದ ದೂರ ಉಳಿದಿದ್ದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮತ್ತೆ ಸೋನಿಯಾ ಅವರೊಂದಿಗೆ ಸುಷ್ಮಾ ಅವರು ಆತ್ಮೀಯರಾಗಿಯೇ ಇದ್ದರು. ಜನರ ಸಮಸ್ಯೆಗಳು, ದೇಶದ ಕೆಲಸಗಳನ್ನು ಮಾಡಲು ಸೌಮ್ಯವಾಗಿಯೇ ಇರುತ್ತಿದ್ದ ಅವರು, ದೇಶದ ಗೌರವದ ಪ್ರಶ್ನೆ ಎದುರಾದ ಸಂದರ್ಭದಲ್ಲಿ ಬೆಂಕಿಯ ಚೆಂಡಾಗುತ್ತಿದ್ದರು. ಈ ಘಟನೆಯ ಅವರ ಧೈರ್ಯಕ್ಕೆ ಸಾಕ್ಷಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *