ನವದೆಹಲಿ: ಲೋಕಸಭೆಯಲ್ಲಿ ರಫೇಲ್ ಗದ್ದಲ ಜೋರಾಗಿಯೇ ಇದೆ. ಇತ್ತ ರಾಜ್ಯಸಭೆಯಲ್ಲಿ ರಫೇಲ್ ವಿಚಾರ ಕೂಗು ಕೇಳಿಬಂತು. ರಫೇಲ್ ಪ್ರಶ್ನೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ ಉತ್ತರಕ್ಕೆ ಕಾಂಗ್ರೆಸ್ ನಾಯಕರೊಬ್ಬರು ಸದನದಿಂದ ಹೊರ ನಡೆದಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ರಫೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು. ವಿಪಕ್ಷ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವೆ, ರಫೇಲ್ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ನೀವೆಲ್ಲರು ರಫೇಲ್ ವಿಚಾರವನ್ನು ಜೀವಂತವಾಗಿರಿಸಲು ಪ್ರಯತ್ನ ಮಾಡುತ್ತೀದ್ದೀರಿ ಎಂದು ತಿರುಗೇಟು ನೀಡಿದರು.
Advertisement
Advertisement
ವಿವಾದ ಎಂಬುವುದು ಕೇವಲ ಕಾಂಗ್ರೆಸ್ ಮನದಲ್ಲಿದೆ. ಫ್ರಾನ್ಸ್ ವಿದೇಶಾಂಗ ಸಚಿವರು ಸಹ ರಫೇಲ್ ವಿಚಾರದಲ್ಲಿ ಚರ್ಚೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಫ್ರಾನ್ಸ್ ವಿದೇಶಾಂಗ ಸಚಿವರು ಸ್ವಾಗತಿಸಿದ್ದಾರೆ ಎಂದು ಹೇಳುವ ಮೂಲಕ ಆನಂದ್ ಶರ್ಮಾ ಅವರಿಗೆ ತಿರುಗೇಟು ನೀಡಿದರು. ಸುಷ್ಮಾ ಅವರ ಉತ್ತರ ಕೇಳುತ್ತಿದ್ದಂತೆ ಆನಂದ್ ಶರ್ಮಾ ಸಭಾತ್ಯಾಗ ನಡೆಸಿ ಹೊರ ನಡೆದರು.
Advertisement
ಲೋಕಸಭೆಯಲ್ಲಿ ಟಿಡಿಪಿ ಮತ್ತು ಎಐಎಡಿಎಂಕೆ ನಾಯಕರ ಗಲಾಟೆ ಹೆಚ್ಚು ಮಾಡಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನುತುಗೊಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv