ಸುಶಾಂತ್ ಸಿಂಗ್ ಪುಣ್ಯ ಸ್ಮರಣೆ: ಸಹೋದರನ ನೆನೆದ ಶ್ವೇತಾ

Public TV
1 Min Read
sushanth singh

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 2 ವರ್ಷಗಳಾಗಿವೆ. ಇದೀಗ ಸಹೋದರಿ ಶ್ವೇತಾ ಸುಶಾಂತ್ ಅವರನ್ನ ನೆನೆದು ಭಾವುಕರಾಗಿದ್ದಾರೆ. ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಶ್ವೇತಾ ಸಹೋದರ ಸುಶಾಂತ್‌ನನ್ನು ಸ್ಮರಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

sushanth singh

ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಕಿರುತೆರೆಯಿಂದ ಹಿರಿತೆರೆಗೆ ಬಂದು ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದರು. ಚಿತ್ರರಂಗದ ಹಿನ್ನಲೆ ಇಲ್ಲದೆ ಸ್ವಂತ ಪ್ರತಿಭೆಯ ಮೂಲಕ ನೆಲೆ ನಿಂತ ಮಹಾನ್ ಕಲಾವಿದ ಸುಶಾಂತ್, ಅಗಲಿ ಇದೀಗ ಎರಡು ವರ್ಷಗಳಾಗಿದೆ. ಕಳೆದ ಜೂನ್ 14, 2020ರಂದು ನಟ ಸುಶಾಂತ್ ನಿಧನರಾಗಿದ್ದರು. ಇನ್ನು ನಟನ ಪುಣ್ಯಸ್ಮರಣೆಯನ್ನು ಕಹಿ ನೆನಪಿನಿಂದಲೇ ಮಾಡುತ್ತಿದ್ದಾರೆ. ಇದೀಗ ಸಹೋದರಿ ಶ್ವೇತಾ ಸಿಂಗ್ ಸುಶಾಂತ್ ನೆನೆದು ಭಾವುಕರಾಗಿದ್ದಾರೆ.ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

ನೀವು ನಮ್ಮೆಲ್ಲರನ್ನ ಅಗಲಿ ಎರಡು ವರ್ಷಗಳಾಗಿದೆ. ಜೀವನದ ನಿಮ್ಮ ಮೌಲ್ಯಗಳಿಂದ ನೀವು ಅಮರರಾಗಿದ್ದೀರಿ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದೀರಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದೀರಿ. ನಿಮ್ಮ ಬದುಕಿನ ಆದರ್ಶಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ .ನಾವೆಲ್ಲರೂ ದೀಪವನ್ನು ಬೆಳಗಿಸೋಣ, ಇನ್ನೋಬ್ಬರ ಮುಖದಲ್ಲಿ ನಗುವನ್ನು ತರಲು ನಿಸ್ವಾರ್ಥ ಕೆಲಸವನ್ನು ಮಾಡೋಣ ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಸುಶಾಂತ್ ಸಹೋದರಿಯ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *