ಬಾಲಿವುಡ್ (Bollywood) ನಟಿ ರಿಯಾ ಚಕ್ರವರ್ತಿ (Rhea Chakraborty) ಮತ್ತೆ ಸುದ್ದಿಯಲ್ಲಿದ್ದಾರೆ. ಸುಶಾಂತ್ ರಜಪೂತ್ ಗರ್ಲ್ಫ್ರೆಂಡ್ ರಿಯಾ ಎರಡೂವರೆ ವರ್ಷದ ನಂತರ ಇದೀಗ ತಮ್ಮ ಪ್ರೀತಿಯನ್ನ ಕಂಡುಕೊಂಡಿದ್ದಾರೆ. ಉದ್ಯಮಿ ಬಂಟಿ ಸಜ್ದೇಹ್ (Bunty Sajdeh) ಜೊತೆ ಡೇಟಿಂಗ್ ಮಾಡ್ತಿದ್ದಾರೆ.
ಸುಶಾಂತ್ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಶಾಂತ್ ಸಾವಿನ ನಂತರ ರಿಯಾ ಅವರನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಎರಡೂವರೆ ವರ್ಷಗಳ ನಂತರ ಮತ್ತೆ ನಟಿ ಎಂಗೇಜ್ ಆಗಿದ್ದಾರೆ. ಫ್ಯಾಷನ್ ಡಿಸೈನರ್ ಸೀಮಾ ಸಹೋದರ ಬಂಟಿ ಸಜ್ದೇಹ್ ಜೊತೆ ರಿಯಾ ಎಂಗೇಜ್ ಆಗಿದ್ದಾರೆ.
ಕಾರ್ನರ್ಸ್ಟೋನ್ ಸ್ಪೋರ್ಟ್ಸ್ ಎಂಡಿ ಬಂಟಿ ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದು, ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಟಿ ರಿಯಾ ವೈಯಕ್ತಿಕ ಜೀವನ ಮತ್ತು ಸಿನಿಮಾ ಕೆರಿಯರ್ ಎರಡರಲ್ಲೂ ಸೋತಿರುವ ಸಮಯದಲ್ಲಿ ಬಂಟಿ ಜೊತೆಯಾಗಿ ನಿಂತು ಸಾಥ್ ನೀಡಿದ್ದರು. ಇದನ್ನೂ ಓದಿ: ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ
View this post on Instagram
ಸದ್ಯ ಬಿಟೌನ್ ಬಂಟಿ ಮತ್ತು ರಿಯಾ ಡೇಟಿಂಗ್ ಮ್ಯಾಟರ್ ಭಾರಿ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ, ಸದ್ಯದಲ್ಲೇ ಅಧಿಕೃತವಾಗಿ ಹೇಳುವ ಯೋಚನೆ ಇದ್ಯಾ ಎಂಬುದನ್ನ ಕಾದುನೋಡಬೇಕಿದೆ.