ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav), ವಿರಾಟ್ ಕೊಹ್ಲಿ (Virat Kohl) ಅವರ ಹೆಸರಲ್ಲಿದ್ದ 13 ವರ್ಷಗಳ ಹಳೆಯ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.
Milestone ????
2⃣0⃣0⃣0⃣ T20I runs (and going strong ????????) for Suryakumar Yadav! ???? ????
Follow the Match ???? https://t.co/4DtSrebAgI #TeamIndia | #SAvIND pic.twitter.com/lK1n7BvpzQ
— BCCI (@BCCI) December 12, 2023
Advertisement
ದಕ್ಷಿಣ ಆಫ್ರಿಕಾ ವಿರುದ್ಧ ಗ್ಕೆಬರ್ಹಾ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸೂರ್ಯಕುಮಾರ್ 36 ಎಸೆತಗಳಲ್ಲಿ 56 ರನ್ (3 ಸಿಕ್ಸರ್, 5 ಬೌಂಡರಿ) ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗದ 2000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡರು. ಇದನ್ನೂ ಓದಿ: ವೇಗಿ ಮೊಹಮ್ಮದ್ ಶಮಿ ಫಾರ್ಮ್ ಹೌಸ್‌ಗೆ ಬಿಗಿ ಭದ್ರತೆ
Advertisement
2010ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 56ನೇ ಇನಿಂಗ್ಸ್ ನಲ್ಲಿ 2000 ಸಾವಿರ ರನ್ ಪೂರೈಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಹ ತಮ್ಮ 56ನೇ ಇನ್ನಿಂಗ್ಸ್‌ನಲ್ಲಿ 2,000 ರನ್ ಪೂರೈಸಿದ್ದಾರೆ. 2000 ರನ್ ಪೂರೈಸಲು 1,164 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೇ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಕ್ಯಾಪ್ಟನ್ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಫಾರ್ಮ್‍ನಲ್ಲಿದ್ದರೆ 2024ರ ಟಿ20 ವಿಶ್ವಕಪ್‍ನಲ್ಲಿ ತಂಡವನ್ನು ಮುನ್ನಡೆಸಲಿ: ಗಂಭೀರ್
Advertisement
Advertisement
ಸೂರ್ಯಕುಮಾರ್ ಯಾದವ್ 2022ರ ಅಕ್ಟೋಬರ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್ ಪಟ್ಟಕ್ಕೇರಿದರು. 31 ಪಂದ್ಯಗಳಲ್ಲಿ 1,164 ರನ್‌ಗಳನ್ನು ಪೂರೈಸಿ ವಿಶ್ವದ ನಂ.1 ಪಟ್ಟಕ್ಕೇರಿದರು. 2023ರ ವರ್ಷದಲ್ಲಿಯೂ ನಂ.1 ಪಟ್ಟದಲ್ಲಿ ಮುಂದುವರಿದಿದ್ದಾರೆ. ಈಗಾಗಲೇ 17 ಪಂದ್ಯಗಳಿಂದ 45.53 ಸರಾಸರಿಯಲ್ಲಿ, 153 ಸ್ಟ್ರೈಕ್‌ರೇಟ್‌ನಲ್ಲಿ 592 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 4 ಅರ್ಧಶತಕಗಳು ಸೇರಿವೆ.