ದುಬೈ: ಏಷ್ಯಾ ಕಪ್ ಫೈನಲ್ (Asia Cup Final) ಫೋಟೋಶೂಟ್‌ನಲ್ಲಿ ಭಾಗವಹಿಸದ ಮೂಲಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಐಸಿಸಿ, ಏಷ್ಯಾಕಪ್‌ನಂತಹ ಪ್ರತಿಷ್ಠಿತ ಟೂರ್ನಿಯ ಫೈನಲ್ ಪಂದ್ಯಕ್ಕೂ ಮೊದಲು ಎರಡು ತಂಡಗಳ ನಾಯಕರು ಕಪ್ ಜೊತೆ ನಿಂತುಕೊಂಡು ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಈ ಬಾರಿ ಸೂರ್ಯಕುಮಾರ್ ಯಾದವ್ ಫೋಟೋಶೂಟ್‌ಗೆ (Photoshoot) ʼನೋʼ ಎಂದಿದ್ದಾರೆ. ಇದನ್ನೂ ಓದಿ: ಏಷ್ಯಾ ಕಪ್‌ಗಾಗಿ ಇಂದು ಭಾರತ-ಪಾಕ್ ಸಮರ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ (Pakistan) ನಾಯಕ ಸಲ್ಮಾನ್ ಅಲಿ ಆಘಾ, ಫೋಟೋಶೂಟ್ ನಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬುದು ಸೂರ್ಯಕುಮಾರ್ ಅವರ ನಿರ್ಧಾರ. ಈ ವಿಚಾರದ ಬಗ್ಗೆ ನಾನು ಏನು ಹೇಳಲಾರೆ ಎಂದು ತಿಳಿಸಿದರು.
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್ ಮತ್ತು ಸೂಪರ್ 4 ಎರಡೂ ಪಂದ್ಯಗಳಲ್ಲಿ ಭಾರತವೇ ಜಯಗಳಿಸಿದೆ. ಅಷ್ಟೇ ಅಲ್ಲದೇ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.