ದುಬೈ: ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಟಿ20 (T20) ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕಿಸ್ತಾನ (Pakistan) ತಂಡದ ನಾಯಕನನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ.
ಸೆಪ್ಟೆಂಬರ್ 20ರಂದು ಮೊಹಾಲಿಯ ಕ್ರೀಡಾಂಗಣದಲ್ಲಿ ನಡೆದ ಭಾರತ (Team India)-ಆಸ್ಟ್ರೇಲಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 25 ಎಸೆತಗಳಲ್ಲಿ 46 ರನ್ ಸಿಡಿಸಿದ ಸೂರ್ಯಕುಮಾರ್ 4ರಿಂದ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಆಜಂ (BabarAzam) ನನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: 8 ಓವರ್ 100 ರನ್ – ದುಬಾರಿಯಾದ ಭುವಿ, ಹರ್ಷಲ್: ರೋಹಿತ್ ಹೇಳಿದ್ದೇನು?
Advertisement
Advertisement
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿರುವ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ (Mohammad Rizwan) ಮೊದಲ ಪಂದ್ಯದಲ್ಲೇ 46 ಎಸೆತಗಳಲ್ಲಿ 68 ರನ್ ಬಾರಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಇದನ್ನೂ ಓದಿ: ಮಹಿಳಾ ಏಷ್ಯಾಕಪ್‍ಗೆ ಭಾರತ ತಂಡ ಪ್ರಕಟ – ಕೌರ್ ನಾಯಕಿ, ಮಂದಾನ ಉಪನಾಯಕಿ
Advertisement
ಮೊಹಮ್ಮದ್ ರಿಜ್ವಾನ್ 825 ರೇಟಿಂಗ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಏಡನ್ ಮಾರ್ಕರಮ್ 792 ರೇಟಿಂಗ್ಸ್‌ನೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. 780 ರೇಟಿಂಗ್ಸ್ ಗಳಿಸಿರುವ ಸೂರ್ಯಕುಮಾರ್ 3ನೇ ಸ್ಥಾನದಲ್ಲಿದ್ದಾರೆ. 771 ರೇಟಿಂಗ್ಸ್ ಗಳಿಸಿರುವ ಬಾಬರ್ ಆಜಂ 4ನೇ ಸ್ಥಾನ, 725 ರೇಟಿಂಗ್ಸ್ ಅಂಕಗಳಿಸಿರುವ ಇಂಗ್ಲೆಂಡ್‌ನ (England) ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ 5ನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ಟಿ20 ಕ್ಯಾಪ್ಟನ್ ಆರನ್ ಫಿಂಚ್ (Aaron Finch) 715 ರೇಟಿಂಗ್ಸ್ ಅಂಕಗಳೊಂದಿಗೆ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ.
Advertisement
ಟಾಪ್-10ನಲ್ಲಿ ಸೂರ್ಯನೊಬ್ಬನೆ:
ಐಸಿಸಿ (ICC) ಟಿ20 ರ‍್ಯಾಂಕಿಂಗ್ (T20 Ranking) ಪಟ್ಟಿಯ ಟಾಪ್-10ನಲ್ಲಿ ಸೂರ್ಯಕುಮಾರ್ ಯಾದವ್ ಹೊರತುಪಡಿಸಿದ್ರೆ ಟೀಂ ಇಂಡಿಯಾದ (Team India) ಯಾರೊಬ್ಬರೂ ಸ್ಥಾನ ಪಡೆದುಕೊಂಡಿಲ್ಲ. ಆದರೆ 602 ರೇಟಿಂಗ್ಸ್ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 14ನೇ ಸ್ಥಾನದಲ್ಲಿದ್ದು, 591 ರೇಟಿಂಗ್ಸ್ ಹೊಂದಿರುವ ವಿರಾಟ್ ಕೊಹ್ಲಿ (Virat Kohli) 15 ರಿಂದ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೆಎಲ್ ರಾಹುಲ್ 587 ರೇಟಿಂಗ್ಸ್‌ನೊಂದಿಗೆ 23 ರಿಂದ 18ನೇ ಸ್ಥಾನಕ್ಕೇರಿದ್ದರೆ, 569 ರೇಟಿಂಗ್ಸ್ ಹೊಂದಿರುವ ಇಶಾನ್ ಕಿಶನ್ 22 ರಿಂದ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಕೇವಲ 30 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 88 ರಿಂದ 65ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಸೆಪ್ಟೆಂಬರ್ 20ರಂದು ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್‌ಗಳನ್ನು ಗಳಿಸಿತು. ಈ ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‌ಗಳನ್ನು ಪೇರಿಸಿ ಗೆಲುವು ಸಾಧಿಸಿತು.