ಚಿಕ್ಕಬಳ್ಳಾಪುರ: ವಿಫಲ ಕೊಳವೆ ಬಾವಿಗಳಲ್ಲಿ ನೀರು ನುಸುಳುತ್ತಿರುವ ಹಾಗೂ ಗಾಳಿ ಹೊರ ಬರುತ್ತಿರುವ ಅಚ್ಚರಿಯ ಘಟನೆ ಶಿಡ್ಲಘಟ್ಟ ತಾಲೂಕಿನ ಯಲವಳ್ಳಿ ಗ್ರಾಮದ ಬಳಿಯ ಭದ್ರನಕೆರೆಯಲ್ಲಿ ನಡೆದಿದೆ. ಯಲವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಘಟನೆಯಿಂದ ಅಚ್ಚರಿ ಪಟ್ಟಿದ್ದಾರೆ.
Advertisement
ವಿಜಯಪುರ ಪುರಸಭೆ ವತಿಯಿಂದ ಈ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಅವುಗಳು ವಿಫಲವಾಗಿದ್ದು, ಪುರಸಭೆ ಅಧಿಕಾರಿಗಳು ಮುಚ್ಚದೇ ಹಾಗೇ ಬಿಟ್ಟಿದ್ದರು. ಬೆಳ್ಳೂಟಿ ಕೆರೆಯಿಂದ ಭದ್ರನಕೆರೆಗೆ ಹರಿದು ಬರುತ್ತಿರುವ ನೀರು ಈ ಕೊಳವೆ ಬಾವಿಗಳಲ್ಲಿ ನುಸುಳುತ್ತಿದ್ದು, ಇನ್ನೂ ಕೆಲವೆಡೆ ವಿಫಲ ಕೊಳವೆ ಬಾವಿಗಳಿಂದ ನೀರು ಉಕ್ಕುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಋಣ ತೀರಿಸಲು ಮುಂದಾದ್ರಾ ಸುಮಲತಾ?
Advertisement
Advertisement
ಕೊಳವೆ ಬಾವಿಗಳ ಒಳಗೆ ನೀರು ಸುರುಳಿಯಾಕಾರದಲ್ಲಿ ನುಸುಳುತ್ತಿದ್ದ ದೃಶ್ಯ ಕಂಡ ಜನರು ಅಚ್ಚರಿ ಪಟ್ಟಿದ್ದಾರೆ. ಗ್ರಾಮಸ್ಥರ ಆಕ್ರೋಶದ ನಂತರ ವಿಫಲ ಕೊಳವೆ ಬಾವಿಗಳಿಗೆ ಪುರಸಭೆ ಸಿಬ್ಬಂದಿ ಕ್ಯಾಪ್ ಹಾಕಿ ಮುಚ್ಚಿದ್ದಾರೆ.