ತುಮಕೂರು: ಗ್ರಾಮಾಂತರ ಶಾಸಕರಿಗೆ ವಿದೇಶಿ ಪ್ರವಾಸ ಅಂದ್ರೆ ಬಹಳ ಪ್ರೀತಿ ಥೈಲ್ಯಾಂಡ್ (Thailand) ಅಂದರೆ ಬಲು ಪ್ರೀತಿ, ಗೋವಾ (Goa) ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹಾಲಿ ಶಾಸಕ ಗೌರಿಶಂಕರ್ (Gowrishankar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು (Tumakuru) ಗ್ರಾಮಾಂತರದ ಬೆಳಗುಂಬದಲ್ಲಿ ಸಿದ್ದರಾಮ ದೇವಸ್ಥಾನದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸುರೇಶ್ ಗೌಡ, ಶಾಸಕರಿಗೆ ಥೈಲ್ಯಾಂಡ್‌ಗೆ ಹೋಗೋದಕ್ಕೆ ಸಮಯ ಇರುತ್ತದೆ. ಶಾಸಕರಿಗೆ ಗೋವಾಗೆ ಹೋಗೋದಕ್ಕೆ ಸಮಯ ಇರುತ್ತದೆ. ಅಸೆಂಬ್ಲಿಗೆ ಹೋಗೋದಕ್ಕೆ ಸಮಯ ಇರಲ್ಲ. ಅಸೆಂಬ್ಲಿಗೆ ಹೋಗುವ ಸಮಯದಲ್ಲಿ ಗೋವಾದಲ್ಲಿ ಇರುತ್ತಾರೆ. ಇಲ್ಲದಿದ್ದರೆ ಥೈಲಾಂಡ್‍ನಲ್ಲಿ ಇರುತ್ತಾರೆ. ಶಾಸಕರಾಗಿ ನಾಲ್ಕು ವರ್ಷ ಆಗಿದೆ. ಶಾಸಕರ ಪಾಸ್‍ಪೋರ್ಟ್ ತೆಗೆದರೆ ಗೊತ್ತಾಗುತ್ತದೆ. ಶಾಸಕರು ಎಷ್ಟು ಸಾರಿ ದುಬೈಗೆ ಹಾರಿದ್ದಾರೆ, ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡೋದು ರೂಢಿ: ಚಕ್ರವರ್ತಿ ಸೂಲಿಬೆಲೆ
- Advertisement
- Advertisement
ನನ್ನ ಪಾಸ್‍ಪೋರ್ಟ್ ತೆಗೆದು ನೋಡಿ ಎಷ್ಟು ವಿದೇಶಿ ಪ್ರವಾಸ ಮಾಡ್ತೇನೆ ಅಂತ. ಶಾಸಕನಾಗಿದ್ದ 10 ವರ್ಷದಲ್ಲಿ ಮನೆ ದೇವರಲ್ಲಿಗೆ ಬಿಟ್ರೆ ಎಲ್ಲೂ ಹೋಗಿಲ್ಲ ನಾನು. ಎಂತೆಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸೋಲಿಸಿರೋದನ್ನು ನೋಡಿದ್ದೇವೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು, ಯಡಿಯೂರಪ್ಪ, ಇಂದಿರಾಗಾಂಧಿ, ವಾಜಪೇಯಿ, ದೇವೇಗೌಡರು ಎಲ್ಲರನ್ನೂ ಸೋಲಿಸಿರೋದನ್ನು ಪ್ರಪಂಚದಲ್ಲಿ ನೋಡಿದ್ದೇವೆ ಎಂದು ಅಭಿಪ್ರಾಪಟ್ಟಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು
ಸೋತೆ ಅಂತಾ ಯಾರೂ ಸುಮ್ಮನೆ ಕೂರಲ್ಲ ರಾಜಕಾರಣಿಗಳು. ಸೋಲು ಅನಿರೀಕ್ಷಿತ. ನನ್ನನ್ನು ಕೆಲಸ ಮಾಡಿಲ್ಲ ಅಂತಾ ಸೋಲಿಸಲಿಲ್ಲ. ಕುತಂತ್ರದಿಂದ ನನ್ನನ್ನು ಸೋಲಿಸಿದ್ದು, ವಂಚನೆ, ಮೋಸ, ಕುತಂತ್ರ ಮಾಡಿ. ಈ ಶಾಸಕರು ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ. ನ್ಯಾಯ ಅನ್ನೋದು ಇದ್ರೆ, ಸಿದ್ದರಾಮೇಶ್ವರನ ಮುಂದೆ ಹೇಳ್ತೇನೆ. ಸಿದ್ದರಾಮೇಶ್ವರ ನಿನ್ನನ್ನು ನಂಬಿದ್ದೇನೆ. ಇನ್ನೊಂದು ತಿಂಗಳಲ್ಲಿ ತೀರ್ಪು ಬರಬೇಕು. ಸಿದ್ದರಾಮೇಶ್ವರನಲ್ಲಿ ಪ್ರಾರ್ಥನೆ ಮಾಡ್ತೇನೆ. ಈ ಮಣ್ಣಲ್ಲಿ ನ್ಯಾಯ ಇದ್ರೆ ಮೋಸಕ್ಕೆ ಶಿಕ್ಷೆ ಆಗ್ಲಿ ಎಂದು ದೇವರ ಮೊರೆ ಹೋಗಿದ್ದಾರೆ.