ಬೆಂಗಳೂರು: ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡುವುದು ಸಹಜ ರೂಢಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದ್ದಾರೆ.
Advertisement
ಮಂಗಳೂರು (Mangaluru) ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡುವುದು ಸಹಜ ರೂಢಿ. ಅವರ ರಕ್ತದಲ್ಲಿಯೇ ಇನ್ನೊಬ್ಬರನ್ನು ಕೊಲ್ಲುವುದು ಕಾಲಘಟ್ಟದಿಂದಲೂ ಬಂದಿದೆ. ಇಡೀ ಪಿಎಫ್‍ಐ (PFI) ತಾನು ಮುಂದಿನ ಒಂದು ವರ್ಷಗಳಲ್ಲಿ ಮಾಡಬೇಕಾದಂತ ಎಲ್ಲಾ ಯೋಜನೆಗಳನ್ನು ಮಾಡಲು ಸಿದ್ಧ ಮಾಡಿದ್ದಾಗ ಬ್ಯಾನ್ ಮಾಡುವ ಮೂಲಕ ಆಘಾತ ನೀಡಿದ್ದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಆ ಕಾರಣಕ್ಕೆ ಈ ರೀತಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರನ್ನು ಹಿಂದೂ ಭಯೋತ್ಪಾದಕರೆಂದು ಗುರುತಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಹಿಂದೂಗಳ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವಂತಹ ನಿಟ್ಟಿನಲ್ಲಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಆತಂಕಕಾರಿಯಾಗಿದೆ. ಪ್ರೆಶರ್ ಕುಕ್ಕರ್ ಬಾಂಬ್‍ಗಿಂತ ಈ ಮನಸ್ಥಿತಿ ಕೆಟ್ಟದು. ಈ ಹಿಂದೆ ಮುಂಬೈ ದಾಳಿ ವೇಳೆಯೂ ಕಸಾಬ್ ಕೂಡ ಕೈಗೆ ದಾರ ಕಟ್ಟಿಕೊಂಡು ಹೀಗೆ ಬಂದಿದ್ದ. ಅವನನ್ನ ಬಂಧಿಸದಿದ್ದರೆ ಅವನನ್ನು ಹಿಂದೂ ಭಯೋತ್ಪಾದಕ ಎಂದು ಬಿಂಬಿಸುತ್ತಿದ್ದರು. ಅದರಂತೆ ಇವತ್ತು ಕೂಡ ಹಾಗೇ ಬಿಂಬಿಸುವ ಕೆಲಸವಾಗುತ್ತಿದೆ. ಪಿಎಫ್‍ಐ ಸಂಘಟನೆ ಬ್ಯಾನ್‌ನಿಂದ ಹೆದರಿದ್ದಾರೆ. ಪಿಎಫ್‍ಐನವರಿಗೆ ಬ್ಯಾನ್ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಸದ್ಯ ಇರುವಂತ ನೆಟ್‍ವರ್ಕ್ ಮೂಲಕ ಬದುಕಿದ್ದೇವೆ ಎಂದು ತೋರಿಸಿಕೊಳ್ಳುವ ಪ್ರಯತ್ನವೇ ಇದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್ ಕೇಸ್ – ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
Advertisement
ಪ್ರಕರಣ ಆದಾಗ ಮಾತ್ರ ಬಂದು ಪೊಲೀಸರು ಡ್ರಾಮಾ ಮಾಡುವುದನ್ನು ಬಿಟ್ಟುಬಿಡಿ. ಇತರೆ ಪ್ರಕರಣಗಳಂತೆ ನಾಲ್ಕು ದಿನ ಓಡಾಡಿ 5ನೇ ದಿನಕ್ಕೆ ಪ್ರಕರಣ ಸತ್ತು ಹೋಗುವಂತೆ ಮಾಡಬೇಡಿ. ಎಲ್ಲವನ್ನೂ ಎನ್‍ಐಎಗೆ ಕೊಟ್ಟಿದ್ದೇವೆಂದು ಕೈ ತೊಳೆದುಕೊಳ್ಳಬೇಡಿ. ಹರ್ಷನ ಕೇಸ್, ಪ್ರವೀಣ್ ನೆಟ್ಟಾರು ಕೇಸ್‍ನಲ್ಲೂ ಹೀಗೆ ಮಾಡಿದ್ದೀರಾ. ಅಂದೇ ಸರಿಯಾದ ಜಾಡು ಹಿಡಿದು ಹೋಗಿದ್ದರೆ, ಈ ಪ್ರಕರಣವನ್ನು ಭೇದಿಸಬಹುದಿತ್ತು. ಎಲ್ಲವನ್ನು ಗಮನಿಸಿದರೆ ಫೇಲ್ಯೂರ್ ಪೊಲೀಸ್ ಇಲಾಖೆಯದ್ದೆ ಅನ್ನಿಸುತ್ತದೆ. ಈಗಾಲಾದರು ಪ್ರಕರಣದ ಹಿಂದೆ ಬಿದ್ದು, ಭೇದಿಸಿ ಕರ್ನಾಟಕವನ್ನು ಕಾಪಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ