ಕೊಲ್ಕತ್ತಾ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಂಗಾಳದ ಮಾಜಿ ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ(70) ಅವರು ಇಂದು ಕೊನೆಯುಸಿರೆಳೆದರು.
ಪೂರ್ವ ಬಂಗಾಳದ ಮಾಜಿ ನಾಯಕ ಸೆನ್‍ಗುಪ್ತಾ ಅವರಿಗೆ ಜನವರಿ 23ರಂದು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ವೆಂಟಿಲೇಟರ್‍ನಲ್ಲಿ ಇದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಸೂರಜಿತ್ ಸೇನ್‍ಗುಪ್ತಾ ಅವರು ಕೋಲ್ಕತ್ತಾದ ಎಲ್ಲಾ ಕ್ಲಬ್‍ಗಳಿಗೆ ಆಡಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. 1975ರಲ್ಲಿ ಪೂರ್ವ ಬಂಗಾಳದ ತಂಡದ ಪರ ಆಡಿದ್ದ ಅವರು, ಮೋಹನ್ ಬಗಾನ್ ಅನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಐಎಫ್‍ಎ ಪದಕವನ್ನು ಗೆಲ್ಲಲು ಕಾರಣರಾಗಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಪರ ಆಡಿದ್ದರು. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್
Advertisement
Advertisement
ಸೂರಜಿತ್ ಸೇನ್‍ಗುಪ್ತಾ ಅವರ ನಿಧನಕ್ಕೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕ್ರಿಕೆಟಿಗ ಮನೋಜ್ ತಿವಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದರು. ಇದನ್ನೂ ಓದಿ: ಹಾಲಿ ವಿಶ್ವ ನಂಬರ್ 1 ಬೌಲರ್ ಐಪಿಎಲ್‍ನಲ್ಲಿ ಅನ್‍ಸೋಲ್ಡ್