ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ವಿಶ್ವ ಟಿ20 ಕ್ರಿಕೆಟ್‍ನ ನಂಬರ್ 1 ರ‍್ಯಾಂಕಿಂಗ್ ಬೌಲರ್ ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿ ಅನ್‍ಸೋಲ್ಡ್ ಆಗಿದ್ದಾರೆ.
Advertisement
ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ ಅನ್‍ಸೋಲ್ಡ್ ಆಗಿದ್ದರು. 1 ಕೋಟಿ ಮೂಲಬೆಲೆ ಹೊಂದಿದ್ದ ಶಮ್ಸಿಯನ್ನು ಖರೀದಿಸಲು ಯಾವ ಫ್ರಾಂಚೈಸ್ ಕೂಡ ಮುಂದಾಗಿರಲಿಲ್ಲ. ಹಾಗಾಗಿ ಅನ್‍ಸೋಲ್ಡ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ
Advertisement
Advertisement
ಐಪಿಎಲ್ ಹರಾಜಿನ ವೇಳೆ ಶಮ್ಸಿ ವಿಶ್ವ ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬಳಿಕ ಇದೀಗ ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ನಲ್ಲಿ ಶಮ್ಸಿ 784 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದಾರೆ. ಆದರೆ ಶಮ್ಸಿ ಐಪಿಎಲ್‍ನಲ್ಲಿ ಮಾತ್ರ ಅನ್‍ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು
Advertisement
???? New number one T20I bowler
???? Rohan Mustafa launches into the top-10
⏫ Josh Hazlewood climbs four spots after an incredible performance against Sri Lanka
Some big movements in the latest @MRFWorldwide ICC Men's Player Rankings for T20Is.
Details ???? https://t.co/YrLa53Ls5E pic.twitter.com/otGbDw3B0r
— ICC (@ICC) February 16, 2022
ಶಮ್ಸಿ ಆಫ್ರಿಕಾ ಪರ 47 ಟಿ20 ಪಂದ್ಯವಾಡಿದ್ದು, 57 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 6 ಮತ್ತು ಏಕದಿನ ಪಂದ್ಯದಲ್ಲಿ 44 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಹಿಂದಿನ ಆವೃತ್ತಿಗಳ ಐಪಿಎಲ್‍ನಲ್ಲಿ ಕೂಡ ಆಡಿದ್ದರು. ಐಪಿಎಲ್‍ನಲ್ಲಿ 5 ಪಂದ್ಯಗಳನ್ನು ಆಡಿ 3 ವಿಕೆಟ್ ಕಿತ್ತಿದ್ದಾರೆ.