ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ

Public TV
1 Min Read
Suraj Revanna

ಹಾಸನ: ಜಾತಿಗಣತಿ ವರದಿ (Caste Census Report) ಯಾರನ್ನೋ ಕೂರಿಸಿ ಬರೆಸಿದಂತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Suraj Revanna) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿಗಣತಿ ವರದಿ ವಿಚಾರದ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿಯಲ್ಲಿ ವೈಜ್ಞಾನಿಕ ದತ್ತಾಂಶವಿಲ್ಲ, ಸಾಕ್ಷ್ಯವಿಲ್ಲ. ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಕೂರಿಸಿಕೊಂಡು ಬರೆಸಿರುವಂತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ – ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಜಾತಿಗಣತಿ ಉದ್ದೇಶ ಒಂದು ಸಮಾಜದ ಏಳಿಗೆಗೆ ಇರಬೇಕು. ಆದರೆ, ಇದು ಜಾತಿಗಳನ್ನು ಒಡೆದು, ರಾಜಕೀಯ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಬರಬೇಕೆಂಬ ಉದ್ದೇಶವಷ್ಟೇ ಕಾಣುತ್ತದೆ. ಇದು ರಾಜ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಜಮೀನು ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ವಿಷಯ ಕೋರ್ಟ್‌ನಲ್ಲಿ ಸ್ಟೇ ಆಗಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಕುಮಾರಸ್ವಾಮಿ ಒಬ್ಬರನ್ನಷ್ಟೇ ಅಲ್ಲ, ನಮ್ಮ ಇಡೀ ಕುಟುಂಬವನ್ನೇ ಗುರಿಯಾಗಿಸಲಾಗಿದೆ. ಜೆಡಿಎಸ್‌ನ ಪ್ರತಿಯೊಬ್ಬ ಶಾಸಕರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ರಾಜ್ಯದ ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಜಾತಿ ಓಲೈಕೆ ರಾಜಕಾರಣ ಮತ್ತು ಸಮಾಜವನ್ನು ಒಡೆಯುವ ರಾಜಕೀಯಕ್ಕೆ ಸರ್ಕಾರ ಕೈಹಾಕಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

Share This Article