ನವದೆಹಲಿ: ಇವಿಎಂಗಳೊಂದಿಗೆ ವಿವಿಪ್ಯಾಟ್ ಯಂತ್ರದ ಸ್ಲಿಪ್‌ಗಳನ್ನು ಹೊಂದಾಣಿಕೆ ಮಾಡುವ ಅರ್ಜಿಯನ್ನು ಮುಂದಿನವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಎಡಿಆರ್ (Association for Democratic Reforms) ಸಲ್ಲಿಸಿರುವ ಅರ್ಜಿಯನ್ನು ಮುಂದಿನ ಮಂಗಳವಾರ ಅಥವಾ ಬುಧವಾರಕ್ಕೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.
ಅರ್ಜಿದಾರರ ಸಂಘಟನೆ ಎಡಿಆರ್ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ವಿವಿಪ್ಯಾಟ್ ವಿಚಾರವಾಗಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಕಳುಹಿಸಿದೆ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?
Advertisement
Advertisement
ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಕೋರ್ಟ್ ಮುಂದೆ ಹಾಜರಾಗಿ, ಚುನಾವಣೆ ಹತ್ತಿರವಿದ್ದು, ಈ ಬಗ್ಗೆ ವಿಚಾರಣೆ ನಡೆಸದಿದ್ದರೆ ಈ ಅರ್ಜಿ ನಿಷ್ಫಲವಾಗಲಿದೆ ಎಂದು ವಾದಿಸಿದರು. ಅರ್ಜಿಯ ಪರಿಸ್ಥಿತಿ ಅರಿತ ಪೀಠವು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠ ವಿಚಾರಣೆಗೆ ಸಮ್ಮತಿ ಸೂಚಿಸಿತು. ಇದನ್ನೂ ಓದಿ: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ: ವೆಂಕಟೇಶ್‌ಗೆ ಪ್ರತಾಪ್ ಸಿಂಹ ತಿರುಗೇಟು
Advertisement
Advertisement
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ನಲ್ಲಿ ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ -ವಿವಿಪಿಎಟಿ) ಸ್ಲಿಪ್‌ಗಳನ್ನು ಇವಿಎಂ ಯಂತ್ರಗಳೊಂದಿಗೆ ಹೊಂದಾಣಿಕೆ ಮಾಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದೆ. VVPAT ಸ್ವತಂತ್ರ ಮತ ಪರಿಶೀಲನಾ ಯಂತ್ರವಾಗಿದ್ದು, ಮತದಾರರು ಚಲಾಯಿಸಿದ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ VVPAT ಸ್ಲಿಪ್‌ಗಳ ಮೂಲಕ ಕೇವಲ ಐದು ಆಯ್ದ EVM ಗಳನ್ನು ಪರಿಶೀಲಿಸುವ ಅಭ್ಯಾಸವಿದೆ.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ವಿವಿಪ್ಯಾಟ್ ಸ್ಲಿಪ್‌ಗಳನ್ನು ಸಂಪೂರ್ಣ ಎಣಿಕೆ ಮತ್ತು ಇವಿಎಂಗಳೊಂದಿಗೆ ಹೊಂದಿಸುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ.