ನವದೆಹಲಿ : ಬೈತ್‌ಕೋಲ್ ಗ್ರಾಮದಲ್ಲಿ ನಡೆಯುತ್ತಿರುವ ಕಾರವಾರ ಬಂದರು ವಿಸ್ತರಣೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮುಂದುವರಿಸದಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಪ್ರಕರಣ ಸಂಬಂಧ ಉತ್ತರಿಸುವಂತೆ ನೋಟಿಸ್ ಕೂಡಾ ಜಾರಿ ಮಾಡಿದ್ದಾರೆ.
ಕಾರವಾರ ಬಂದರು ವಿಸ್ತರಣೆ ಸಂಬಂಧ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ನೋಟಿಸ್ ಜಾರಿ ಮಾಡಿ, ಕಾಮಗಾರಿ ನಿಲ್ಲಿಸಬೇಕು ಎಂದು ಹೇಳಿದೆ. ಆದರೆ ಕಾಮಗಾರಿ ತಡೆಗೆ ಯಾವುದೇ ಅಧಿಕೃತ ಲಿಖಿತ ಆದೇಶಗಳನ್ನು ಪೀಠ ನೀಡಿಲ್ಲ. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ
Advertisement
ಬೈತ್‌ಕೋಲ್ ಗ್ರಾಮದಲ್ಲಿ ನಡೆಯುತ್ತಿರುವ ಕಾರವಾರ ಬಂದರು ವಿಸ್ತರಣೆ ಕಾಮಗಾರಿಗೆ ತಡೆ ನೀಡುವಂತೆ ಬೈತ್ಕೋಲ್ ಬಂಡಾರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮಿನುಗಾರರ ಸಹಕಾರ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಶಂಕರಣ್ಣ..?
Advertisement
Advertisement
ಸಮುದ್ರದಲ್ಲಿ ಉಬ್ಬರ ಇಳಿತಗಳ ನಡುವೆ ಇರುವ ಪ್ರದೇಶವನ್ನು ಸಮತಟ್ಟು ಮಾಡಬಾರದು. ಈಗಾಗಲೇ ಕಾರವಾರದ ಶೇ 50ರಷ್ಟು ಪ್ರದೇಶವನ್ನು ಸರ್ಕಾರವು ಒಂದಲ್ಲ ಒಂದು ಯೋಜನೆಗೆ ಬಳಕೆ ಮಾಡುತ್ತಿದೆ. ಇದೇ ರೀತಿಯಲ್ಲಿ ಬಂದರು ವಿಸ್ತರಣೆ ಮಾಡಬಾರದು ಕಾರವಾರದ ಹಲವು ಕಡಲ ತೀರಗಳನ್ನು ಈಗಾಗಲೇ ನೌಕಾನೆಲೆ ಸ್ಥಾಪನೆಗೆಂದು ಬಿಟ್ಟುಕೊಡಲಾಗಿದೆ. ಕಾರವಾರದಲ್ಲಿ ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ಬಹಳ ತೊಂದರೆಯಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮುಂದುವರಿಸಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
Advertisement
ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಹಲವು ವರದಿಗಳನ್ನು ಆಧರಿಸಿ ಕಾಮಗಾರಿ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ಈಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.