ನವದೆಹಲಿ: ಮಾಡೆಲ್ ಒಬ್ಬರ ಹೇರ್‌ಸ್ಟೈಲ್‌ನ್ನು ವಿರೂಪಗೊಳಿಸಿದ್ದಕ್ಕಾಗಿ ಆಕೆಗೆ 2 ಕೋಟಿ ರೂ. ಪರಿಹಾರ (Compensation) ನೀಡುವಂತೆ ಐಟಿಸಿ ಸಲೂನ್ ವಿರುದ್ಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ತಡೆ ನೀಡಿದೆ.
ಎನ್‍ಸಿಡಿಆರ್‌ಸಿ ಆದೇಶವನ್ನು ಪ್ರಶ್ನಿಸಿ ಐಟಿಸಿ (ITC) ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪರಿಹಾರವನ್ನು ಸುಮ್ಮನೆ ಕೇಳುವುದಲ್ಲ, ಅದಕ್ಕೆ ಸೂಕ್ತವಾದ ಕಾರಣ ಹಾಗೂ ಸಾಕ್ಷ್ಯ ಇರಬೇಕು ಎಂದು ಪೀಠ ಹೇಳಿದೆ. ಬಳಿಕ ಮಾಡೆಲ್ ಆಶ್ನಾ ರಾಯ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು. ಇದನ್ನೂ ಓದಿ:ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು
ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕೋಟಿ ರೂ. ಪರಿಹಾರ ನೀಡುವಂತೆ 2021ರ ಸೆ. 21 ರಂದು ಗ್ರಾಹಕರ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಫೆಬ್ರವರಿಯಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ರದ್ದುಗೊಳಿಸಿತ್ತು. ಅಲ್ಲದೆ ಮಾದರಿಯಲ್ಲಿ ಸಲ್ಲಿಸಿದ ವಸ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯುವಂತೆ ಗ್ರಾಹಕರ ನ್ಯಾಯಾಲಯಕ್ಕೆ ಸೂಚಿಸಿತ್ತು. ಪರಿಶೀಲನೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ ಹಿಂದಿನ ತೀರ್ಪನ್ನು ಎತ್ತಿ ಹಿಡಿದಿತ್ತು.
ಏನಿದು ಪ್ರಕರಣ?
2018ರ ಏ.12 ರಂದು ನವದೆಹಲಿಯ (New Delhi) ಹೋಟೆಲ್ ಐಐಟಿ ಮೌರ್ಯದಲ್ಲಿರುವ ಸಲೂನ್‍ಗೆ ಹೇರ್ ಕಟಿಂಗ್‍ಗಾಗಿ ಆಶ್ನಾ ರಾಯ್ ತೆರಳಿದ್ದರು. ಯಾವಾಗಲೂ ಕೇಶ ವಿನ್ಯಾಸ ಮಾಡುತ್ತಿದ್ದ ಕೇಶ ವಿನ್ಯಾಸಕಿ ಸಿಗದ ಕಾರಣ ಬೇರೊಬ್ಬ ವ್ಯಕ್ತಿಗೆ ಆ ಕೆಲಸವನ್ನು ವಹಿಸಲಾಗಿತ್ತು. ಆತ ಮಾಡಿದ್ದ ಕಟಿಂಗ್ ಸರಿಯಾಗಿಲ್ಲ. ವಿರೂಪಗೊಳಿಸಿದ್ದಾನೆ ಎಂದು ಮಾಡೆಲ್ ಆರೋಪಿಸಿದ್ದರು.
ಅಲ್ಲದೆ ಇದರಿಂದಾಗಿ ಮುಜುಗರ ಎದುರಿಸಬೇಕಾಯಿತು. ವಿರೂಪವಾದ ಹೇರ್‌ನಿಂದಾಗಿ ಖಿನ್ನತೆಯನ್ನು ಅನುಭವಿಸಿದೆ. ನನ್ನ ವೃತ್ತಿ ಜೀವನಕ್ಕೆ ಇದರಿಂದ ತೊಂದರೆಯಾಯಿತು. ಇದರಿಂದ ನಷ್ಟ ಅನುಭವಿಸಿದೆ, 3 ಕೋಟಿ ರೂ. ಪರಿಹಾರವನ್ನು ಸಲೂನ್ ನೀಡಬೇಕು ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೊಗಿದ್ದರು. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ