ನವದೆಹಲಿ: ವಿದೇಶಿಯರು (Foreigners) ಎಂದು ಘೋಷಿತರಾದ ವ್ಯಕ್ತಿಗಳನ್ನು ಗಡಿಪಾರು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಸ್ಸಾಂ (Assam) ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆಗೆ ವರ್ಚುವಲ್ ವಿಧಾನದ ಮೂಲಕ ಹಾಜರಿದ್ದ ಅಸ್ಸಾಂನ ಮುಖ್ಯ ಕಾರ್ಯದರ್ಶಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ವಿಳಾಸವಿಲ್ಲದಿದ್ದರೂ ಅವರನ್ನು ಗಡೀಪಾರು ಮಾಡಬಹುದು, ಅನಿರ್ದಿಷ್ಟವಾಗಿ ಅವರನ್ನು ಬಂಧಿಸಿಟ್ಟುಕೊಂಡಿರುವಂತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ – ವೆಂಕಟೇಶ್ ಮೌರ್ಯ
Advertisement
Advertisement
ಒಮ್ಮೆ ಅವರನ್ನು ವಿದೇಶಿಯರೆಂದು ಪರಿಗಣಿಸಿದ ನಂತರ, ಅವರನ್ನು ತಕ್ಷಣವೇ ಗಡಿಪಾರು ಮಾಡಬೇಕು. ಅವರ ಪೌರತ್ವದ ಸ್ಥಿತಿ ನಿಮಗೆ ತಿಳಿದಿದೆ. ಹಾಗಾದರೆ ಅವರ ವಿಳಾಸ ಸಿಗುವವರೆಗೆ ನೀವೇಕೆ ಕಾಯುತ್ತೀರಿ? ಅವರು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸುವುದು ಉಳಿದ ದೇಶಕ್ಕೆ ಬಿಟ್ಟದ್ದು ಎಂದಿತು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಹೆಸರಲ್ಲಿ ಕಿರುಕುಳ ಕೊಡುವವರಿಗೆ ಬಿಸಿ ಮುಟ್ಟಿಸಲು ಶಿಕ್ಷೆ ಪ್ರಮಾಣ ಹೆಚ್ಚಳ – ಪರಮೇಶ್ವರ್
Advertisement
ವಿಳಾಸವಿಲ್ಲದೇ ಹೋದಲ್ಲಿ ಆ ಜನರನ್ನು ಎಲ್ಲಿಗೆ ಗಡೀಪಾರು ಮಾಡಬೇಕೆಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯವನ್ನು ಕೇಳಿದರು. ಆಗ ನ್ಯಾಯಮೂರ್ತಿ ಓಕಾ, ನೀವು ಅವರನ್ನು ಸಂಬಂಧಪಟ್ಟ ದೇಶದ ರಾಜಧಾನಿಗೆ ಗಡಿಪಾರು ಮಾಡಿ. ಆ ವ್ಯಕ್ತಿ ಪಾಕಿಸ್ತಾನದವನಾಗಿದ್ದರೆ ನಿಮಗೆ ಪಾಕಿಸ್ತಾನದ ರಾಜಧಾನಿ ತಿಳಿದಿದೆಯೇ? ಅವರ ವಿದೇಶಿ ವಿಳಾಸ ತಿಳಿಯದೇ ಇದ್ದರೆ ಅವರನ್ನು ಇಲ್ಲಿ ಬಂಧಿಸಿದ್ದಾದರೂ ಹೇಗೆ? ಪರಿಶೀಲನಾ ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ ದಿನಾಂಕವನ್ನು ಏಕೆ ಉಲ್ಲೇಖಿಸಿಲ್ಲ? ಎಂದು ಕಿಡಿಕಾರಿದರು. ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ
Advertisement
ಈ ಕುರಿತು ಸೂಕ್ತ ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದರು. ಆದರೆ ನ್ಯಾಯಾಲಯ ನಾವು ಅಸ್ಸಾಂ ಸರ್ಕಾರ ಸುಳ್ಳು ಸಾಕ್ಷ್ಯದ ನೋಟಿಸ್ ಜಾರಿ ಮಾಡುತ್ತೇವೆ. ಒಂದು ರಾಜ್ಯ ಸರ್ಕಾರವಾಗಿ, ನೀವು ಆರೋಪ ಮುಕ್ತರಾಗಬೇಕು ಎಂದು ಎಚ್ಚರಿಕೆ ನೀಡಿತು. ವಿಚಾರಣೆಯ ಒಂದು ಹಂತದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣ ರಾಜ್ಯಪಟ್ಟಿಗೆ ಬಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಇದನ್ನೂ ಓದಿ: ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ವಿದೇಶಿ ವಿಳಾಸಗಳಿಲ್ಲದಿದ್ದರೂ ಸಹ, ಗಡಿಪಾರು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ನ್ಯಾಯಾಲಯ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಷ್ಟ್ರೀಯತೆ ಪರಿಶೀಲನಾ ಪ್ರಕ್ರಿಯೆಯ ಕುರಿತು ಎರಡು ವಾರಗಳಲ್ಲಿ ದಿನಾಂಕವನ್ನೂ ಒಳಗೊಂಡಂತೆ ತೆಗೆದುಕೊಂಡ ಕ್ರಮಗಳ ವಿವರವಾದ ಅಫಿಡವಿಟ್ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಿತು. ದೇಶಗಳೇ ಇಲ್ಲದ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!