ನವದೆಹಲಿ: ದೇಶದಲ್ಲಿ ನಡೆಯುವ ಮೋಸದ ಧಾರ್ಮಿಕ ಮತಾಂತರಗಳನ್ನು (Religious Conversions) ತಡೆಯಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಕರ್ನಾಟಕ (Karnataka) ಮೂಲದ ಜೆರೋಮ್ ಆಂಟೊ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (D Y Chandrachud) ನೇತೃತ್ವದ ತ್ರಿ ಸದಸ್ಯ ಪೀಠ, ನ್ಯಾಯಾಲಯವು ಈ ವಿಷಯಕ್ಕೆ ಯಾಕೆ ಪ್ರವೇಶಿಸಬೇಕು? ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ಹೇಗೆ ನೀಡಬಹುದು? ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಒಂದು ಸಾಧನವಾಗಿ ಮಾರ್ಪಟ್ಟಿದೆ. ಪ್ರತಿಯೊಬ್ಬರೂ ಈ ರೀತಿಯ ಅರ್ಜಿಗಳೊಂದಿಗೆ ಬರುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿತು. ಇದನ್ನೂ ಓದಿ: ತಮಿಳುನಾಡು ಕಾವೇರಿ ನೀರಿನ ಸಮರ್ಪಕ ಬಳಕೆ ಮಾಡುತ್ತಿಲ್ಲ – ಸುಪ್ರೀಂನಲ್ಲಿ ಕರ್ನಾಟಕ ಆಕ್ಷೇಪ
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಈ ರೀತಿಯ ಕುಂದುಕೊರತೆಯೊಂದಿಗೆ ಎಲ್ಲಿಗೆ ಹೋಗಬೇಕು? ಹಿಂದೂಗಳು (Hindu) ಮತ್ತು ಅಪ್ರಾಪ್ತರನ್ನು ಗುರಿಯಾಗಿಸಿಕೊಂಡು ಅವರನ್ನು ಮೋಸದಿಂದ ಮತಾಂತರ ಮಾಡಲಾಗುತ್ತಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಯಾರಾದರೂ ಸಂತ್ರಸ್ತರಿದ್ದರೇ ನಾವು ಅರ್ಜಿ ವಿಚಾರಣೆ ಮಾಡಬಹುದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತು.
Web Stories