ನವದೆಹಲಿ: ಕನ್ವರ್ ಯಾತ್ರಾ (Kanwar Yatra) ಮಾರ್ಗಗಳ ಉದ್ದಕ್ಕೂ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದೆ.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಕನ್ವರ್ ಯಾತ್ರೆ ನಡೆಯುವ ಇತರ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ. ಜು.26ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ 40 ಕೋಟಿ ರೂ. ಹಣ ಖಜಾನೆಯಿಂದ ನೇರವಾಗಿ ಬೇರೆ ಖಾತೆಗಳಿಗೆ: ಸ್ಪಷ್ಟೀಕರಣ ಕೇಳಿದ ಬೊಮ್ಮಾಯಿ
Advertisement
Advertisement
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಪರ ವಾದಿಸಿದ ಹಿರಿಯ ವಕೀಲ ಚಂದರ್ ಉದಯ್ ಸಿಂಗ್, ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಯಾವುದೇ ಶಾಸನಬದ್ಧ ಬೆಂಬಲವನ್ನು ಆಧರಿಸಿಲ್ಲ. ಇದನ್ನು ಮಾಡಲು ಯಾವುದೇ ಕಾನೂನು ಪೊಲೀಸ್ ಆಯುಕ್ತರಿಗೆ ಅಧಿಕಾರವನ್ನು ನೀಡುವುದಿಲ್ಲ. ಸಸ್ಯಾಹಾರ ಅಥವಾ ಮಾಂಸಾಹಾರ ಇತ್ಯಾದಿಗಳನ್ನು ಮಾತ್ರ ಉಲ್ಲೇಖಿಸಬೇಕಾಗಿದೆ. ಇದು ಕೇವಲ ಢಾಬಾಗಳಿಗೆ ಮಾತ್ರವಲ್ಲ, ಈಗ ಪ್ರತಿಯೊಬ್ಬ ಮಾರಾಟಗಾರರಿಗೂ ಅನ್ವಯಿಸುತ್ತದೆ. ಆದರೆ ಸರ್ಕಾರದ ಆದೇಶ ಈ ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಇಂತಹ ನಿರ್ದೇಶನದಿಂದ ಕೆಲವು ಮಾಲೀಕರು ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿ ನಷ್ಟ ಹೊಂದಲಿದ್ದಾರೆ ಎಂದು ಹೇಳಿದರು.
Advertisement
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಕನ್ವರಿಯಾ ಯಾತ್ರೆಗಳು ದಶಕಗಳಿಂದ ನಡೆಯುತ್ತಿವೆ. ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದ ಜನರು ಅವರ ದಾರಿಯಲ್ಲಿ ಸಹಾಯ ಮಾಡುತ್ತಾರೆ. ಈಗ ನೀವು ಅವರನ್ನು ಹೊರಗಿಡುತ್ತಿದ್ದೀರಿ. ಹಿಂದೂಗಳು ನಡೆಸುತ್ತಿರುವ ಅನೇಕ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಮುಸ್ಲಿಂ ಮತ್ತು ದಲಿತ ಉದ್ಯೋಗಿಗಳನ್ನು ಹೊಂದಿರಬಹುದು. ಅವರಲ್ಲಿ ಮುಸ್ಲಿಂ ಅಥವಾ ದಲಿತ ಉದ್ಯೋಗಿಗಳಿದ್ದರೆ ನೀವು ಅಲ್ಲಿ ತಿನ್ನುವುದಿಲ್ಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭ – ನಾಳೆ ಕೇಂದ್ರ ಬಜೆಟ್ ಮಂಡನೆ
Advertisement
ಈ ವೇಳೆ ಮಧ್ಯ ಪ್ರವೇಶ ಮಾಡಿದ ನ್ಯಾ. ರಾಯ್, ಕನ್ವರಿಯಾಗಳ ನಿರೀಕ್ಷೆಗಳ ಬಗ್ಗೆ ಕೇಳಿದರು? ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಅವರು ಶಿವನನ್ನು ಪೂಜಿಸುತ್ತಾರೆ. ಹೌದು? ಅವರು ಸಸ್ಯ ಆಹಾರವನ್ನು ಬಯಸುತ್ತಾರೆ ಎಂದರು. ಇದಕ್ಕೆ ಪ್ರತಿವಾದ ಮಾಡಿದ ಸಿಂಘ್ವಿ, ಆದರೆ ಒಂದು ನಿರ್ದಿಷ್ಟ ಸಮುದಾಯದಿಂದ ಬೆಳೆಯಬೇಕೆಂದು, ಬಡಿಸಬೇಕೆಂದು ಅವರು ನಿರೀಕ್ಷಿಸುತ್ತಾರೆಯೇ? ಊಟದ ಮಾಲೀಕರು ಯಾರು ಎಂದು ಕೆಲವರು ಕೇಳುವುದಿಲ್ಲ. ಆದರೆ ಏನು ನೀಡಲಾಗುತ್ತಿದೆ ಎಂದು ಮಾತ್ರ ಕೇಳುತ್ತಾರೆ ಎಂದರು.
ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್, ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸುವುದನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ರವಾನಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಆಹಾರ ಮಾರಾಟಗಾರರು, ವ್ಯಾಪಾರಿಗಳು ಇತ್ಯಾದಿಗಳು ಆಹಾರದ ಪ್ರಕಾರವನ್ನು ಪ್ರದರ್ಶಿಸುವ ಅಗತ್ಯವಿದೆ. ಅವರ ವೈಯಕ್ತಿಯ ಮಾಹಿತಿ ನೀಡುವಂತೆ ಒತ್ತಾಯಿಸುವಂತಿಲ್ಲ. ಅವರು ಕನ್ವರಿಯಾರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ಒತ್ತಾಯಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.