ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಇಂದು ವಿಚಾರಣೆ ನಡೆಸಿದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯ ಈ ಪ್ರಕರಣದಿಂದ ಯಡಿಯೂರಪ್ಪನವರನ್ನು ಖುಲಾಸೆಗೊಳಿಸಿದೆ.
ರಾಚೇನಹಳ್ಳಿ ಸೇರಿದಂತೆ 15 ಪ್ರಕರಣಗಳಲ್ಲಿ ಬಿಎಸ್‍ವೈ ಖುಲಾಸೆಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸಿರಾಜಿನ್ ಬಾಷಾ ಹಾಗೂ ಬಾಲಕೃಷ್ಣ ಎಂಬುವರು ಕೇಸ್‍ಗಳನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಅಂತ ಹೇಳಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಜಯಕುಮಾರ್ ಹಿರೇಮಠ ಎಂಬುವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
Advertisement
ಸುಪ್ರೀಂ ಕೋರ್ಟ್ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ವರ್ಗಾಯಿಸಿತ್ತು. ಸೆಷನ್ ಕೋರ್ಟ್‍ನಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಬಿ.ವಿ ಪಾಟೀಲರು ಈಗ ಎಲ್ಲಾ ಕೇಸ್‍ಗಳಲ್ಲೂ ಬಿಎಸ್‍ವೈ ಅವರನ್ನ ಆರೋಪ ಮುಕ್ತ ಗೊಳಿಸಿದ್ದಾರೆ. ಇದು ಸಂತೋಷ ಅಂತ ಬಿಎಸ್‍ವೈ ಹೇಳಿದರೆ ಸತ್ಯವನ್ನು ಬೆನ್ನಿಗೆ ಕಟ್ಕೊಂಡು ಓಡಾಡ್ಲಿ ಎಂದು ಸಿಎಂ ಕುಮಾರಸ್ವಾಮಿ ಕುಟುಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv