ನವದೆಹಲಿ: ಕೋವಿಡ್ ಲಸಿಕೆಗಳಿಂದ (Covid Vaccine) ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಯುನೈಟೆಡ್ ಕಿಂಗ್‌ಡಂನಂತಹ ವಿದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು. ಇದನ್ನೂ ಓದಿ: ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದಲೇ ಹೊರ ಹಾಕಿದ ಭಾರತ
Advertisement
Advertisement
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿತ್ತು. ಆರಂಭದಲ್ಲಿ, ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆಗಳು ಜಾಗತಿಕವಾಗಿ ನೆರವು ನೀಡಿವೆ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ ಎಂದು ಸಿಜೆಐ ಒತ್ತಿ ಹೇಳಿದರು.
Advertisement
ಅರ್ಜಿದಾರರು ನಿಜವಾಗಿಯೂ ನೊಂದಿದ್ದರೆ, ಅವರು ಆರ್ಟಿಕಲ್ 32 ಅರ್ಜಿಗಳನ್ನು ಸಲ್ಲಿಸುವ ಬದಲು ಕ್ಲಾಸ್ ಆಕ್ಷನ್ ಸೂಟ್‌ಗಳನ್ನು ಸಲ್ಲಿಸಬೇಕು ಎಂದು ಸಿಜೆಐ ಹೇಳಿದರು. ‘ಲಸಿಕೆ ತೆಗೆದುಕೊಂಡ ನಂತರ ಅರ್ಜಿದಾರರು ವೈಯಕ್ತಿಕವಾಗಿ ಯಾವುದೇ ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆಯೇ’ ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದರು. ಅದಕ್ಕೆ ವಕೀಲರು ನಕಾರಾತ್ಮಕವಾಗಿ ಉತ್ತರಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ
Advertisement
ಬ್ರಿಟಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ, ಯುಕೆ ಹೈಕೋರ್ಟ್‌ನಲ್ಲಿ 51 ಅರ್ಜಿದಾರರಿಂದ ಕಾನೂನು ಮೊಕದ್ದಮೆಯನ್ನು ಎದುರಿಸುತ್ತಿದೆ. ಲಸಿಕೆಯಿಂದಾಗಿ ಸಾವು-ನೋವುಗಳಾಗಿವೆ ಎಂದು ಆರೋಪಿಸಲಾಗಿತ್ತು. ಕಂಪನಿಯು ಕೋವಿಡ್ ಲಸಿಕೆ ಅಪರೂಪದ ಸನ್ನಿವೇಶಗಳಲ್ಲಿ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ನೊಂದಿಗೆ ಥ್ರಂಬೋಸಿಸ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಕಂಪನಿಯೂ ಒಪ್ಪಿಕೊಂಡಿದೆ.
ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಸೇರಿದಂತೆ ಲಸಿಕೆಗಳನ್ನು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ