ನವದೆಹಲಿ: ಕಾಶ್ಮೀರದಲ್ಲಿ (Kashmir) ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆಗೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್‌ಗಳ ನೋಂದಣಿ, ಮರು ತನಿಖೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿ ಕೋರಿ ಸಲ್ಲಿಸಿದ್ದ ಕ್ಯೂರೆಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್‌ನ (Supreme Court) ಸಿಜೆಐ ಪೀಠ ವಜಾಗೊಳಿಸಿದೆ.
ಕಾಶ್ಮೀರಿ ಪಂಡಿತರ ನ್ಯಾಯ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯಾದ ‘ರೂಟ್ಸ್ ಇನ್ ಕಾಶ್ಮೀರ’ 2017 ರಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಡಿವೈ ಚಂದ್ರಚೂಡ್ ವಜಾ ಮಾಡಿದರು.
1989 ಮತ್ತು 1998 ರ ನಡುವೆ 700 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿದೆ ಮತ್ತು 200 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಒಂದೇ ಒಂದು ಎಫ್‌ಐಆರ್ ಕೂಡಾ ಚಾರ್ಜ್ಶೀಟ್ ಅಥವಾ ಶಿಕ್ಷೆಯ ಹಂತವನ್ನು ತಲುಪಿಲ್ಲ. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ತನಿಖೆ ನ್ಯಾಯವನ್ನು ನೀಡಿಲ್ಲ. 1989 ರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತರ ಬಗ್ಗೆ ಹೊಸ ಐಎಫ್‌ಆರ್ ದಾಖಲಿಸುವುದು ಅಥಾವಾ ಮರು ತನಿಖೆಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ – ನಾನು ಸಿಎಂ ಆಗ್ಬೋದು ಅಂದ ಪ್ರತಿಭಾ ಸಿಂಗ್
ಘಟನೆ ಸಂಭವಿಸಿದ ದಿನಾಂಕದಿಂದ ಇಲ್ಲಿಗೆ 27 ವರ್ಷಗಳು ಕಳೆದಿರುವುದರಿಂದ ತನಿಖೆಯ ಮೂಲಕ ಯಾವುದೇ ಫಲಪ್ರದ ಫಲಿತಾಂಶ ಹೊರಹೊಮ್ಮುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಜೆಎಸ್ ಖೇಹರ್ ನೇತೃತ್ವದ ಪೀಠ 2017ರಲ್ಲಿ ಈ ಅರ್ಜಿಯನ್ನು ವಜಾ ಮಾಡಿತ್ತು. ಇದೇ ಅಂಶಗಳನ್ನು ಉಲ್ಲೇಖಿಸಿದ ಸಿಜೆಐ ಡಿವೈ ಚಂದ್ರಚೂಡ್ ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: `ನಮೋ’ಗೆ ಜೈ ಎಂದ ಗುಜರಾತ್ ಜನ – ನೋಟಾ ಮತ ಶೇ.9ರಷ್ಟು ಇಳಿಕೆ