Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಪ್ರೀಂನಲ್ಲಿಂದು ಫೈನಲ್ ಬ್ಯಾಟಲ್ – ಬೆಳಗ್ಗೆ 11 ಗಂಟೆಗೆ ಪಕ್ಷೇತರರ ಅರ್ಜಿ ವಿಚಾರಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸುಪ್ರೀಂನಲ್ಲಿಂದು ಫೈನಲ್ ಬ್ಯಾಟಲ್ – ಬೆಳಗ್ಗೆ 11 ಗಂಟೆಗೆ ಪಕ್ಷೇತರರ ಅರ್ಜಿ ವಿಚಾರಣೆ

Bengaluru City

ಸುಪ್ರೀಂನಲ್ಲಿಂದು ಫೈನಲ್ ಬ್ಯಾಟಲ್ – ಬೆಳಗ್ಗೆ 11 ಗಂಟೆಗೆ ಪಕ್ಷೇತರರ ಅರ್ಜಿ ವಿಚಾರಣೆ

Public TV
Last updated: July 23, 2019 9:02 am
Public TV
Share
3 Min Read
supreme court
SHARE

ಬೆಂಗಳೂರು: ಸುಪ್ರೀಂ ಕೋರ್ಟಿನಲ್ಲಿ ಇಂದು ಫೈನಲ್ ಬ್ಯಾಟಲ್ ನಡೆಯಲಿದೆ. ಸೋಮವಾರ ಕೂದಳೆಯ ಅಂತರದಲ್ಲಿ ಬದುಕುಳಿದ ದೋಸ್ತಿಗಳಿಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ.

ಶೀಘ್ರ ಬಹುಮತ ಸಾಬೀತಿಗೆ ಕೋರಿ ಪಕ್ಷೇತರ ಶಾಸಕರಾದ ಆರ್. ಶಂಕರ್, ನಾಗೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಇಂದೇ ಮಧ್ಯಂತರ ಆದೇಶ ನೀಡುವ ಸಾಧ್ಯತೆ ಇದೆ. ವಿಚಾರಣೆ ನೆಪ ಹೇಳಿ ಕಾಲದೂಡುವ ದೋಸ್ತಿಗಳಿಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕುತ್ತಾ? ಇಲ್ಲ ದೋಸ್ತಿ ಸರ್ಕಾರಕ್ಕೆ ಜೀವಧಾನ ನೀಡುತ್ತಾ ನೋಡಬೇಕಾಗಿದೆ.

Rebel MLAs C 1

ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯುವುದು ಬಹುತೇಕ ಅನುಮಾನವಾಗಿದೆ. ಯಾಕೆಂದರೆ ಸೂಪರ್ ಪ್ಲಾನ್ ಮಾಡಿರುವ ದೋಸ್ತಿ ನಾಯಕರ ವಕೀಲರು ಸೈಲೆಂಟ್ ಆಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರು ತುರ್ತು ವಿಚಾರಣೆ ಮನವಿ ಮಾಡಿಲ್ಲ. ಹೀಗಾಗಿ ಇಂದಿನ ಸುಪ್ರೀಂ ಕಲಾಪದ ಪಟ್ಟಿಯಲ್ಲಿ ಮೈತ್ರಿ ನಾಯಕರ ಅರ್ಜಿ ಇಲ್ಲ. ಪಟ್ಟಿಯಲ್ಲಿರದ ಕೇಸ್‍ಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಲ್ಲ. ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿ, ತುರ್ತು ವಿಚಾರಣೆಗೆ ಮನವಿ ಮಾಡದೆ ಕಾಲದೂಡುವ ಪ್ಲಾನ್ ಮೈತ್ರಿ ಸರ್ಕಾರ ಹಾಕಿದ್ಯಾ ಎನ್ನುವ ಅನುಮಾನ ಎದ್ದಿದೆ.

220719kpn83

ಸುಪ್ರೀಂಕೋರ್ಟಿನಲ್ಲಿ ಏನಾಗಬಹುದು?
ಮೊದಲಿಗೆ ಆರ್.ಶಂಕರ್ ಅರ್ಜಿ ವಿಚಾರಣೆ ತೆಗೆದುಕೊಳ್ಳಬಹುದು. ತಮ್ಮ ವಿವೇಚನಾ ಅಧಿಕಾರ ಬಳಸಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಬಹುದು ಅಥವಾ ಮೂರು ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಬಹುದು. ಇಲ್ಲ ಕೇವಲ ಆರ್.ಶಂಕರ್ ಅರ್ಜಿಯೊಂದಕ್ಕೆ ಸೀಮಿತವಾಗಿ ವಿಚಾರಣೆ ನಡೆಸಬಹುದು. ಜೊತೆಗೆ ವಿಶ್ವಾಸ ಮತಯಾಚನೆಗಿರುವ ಗೊಂದಲಗಳ ಸಂಬಂಧ ವಿಚಾರಣೆ ಮಾಡಬಹುದು. ವಿಶ್ವಾಸಮತ ಸಾಬೀತಿಗೆ ತಡವಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟನೆ ಕೇಳಬಹುದು.

REBEL MLA 1

ದೋಸ್ತಿ ಅರ್ಜಿ ವಿಚಾರಣೆಗೆ ಬಂದರೆ ಏನಾಗಬಹುದು?
ಸೆಡ್ಯೂಲ್ 10ರ ಪ್ರಕಾರ ರಾಜಕೀಯ ಪಕ್ಷಗಳಿಗಿರುವ ವಿಪ್ ನೀಡುವ ಅಧಿಕಾರದ ಬಗ್ಗೆ ಸುಪ್ರೀಂ ಪರಿಶೀಲನೆ ಮಾಡಬಹದು. ಈ ಮೂಲಕ ಶಾಸಕರ ಮೇಲೆ ಒತ್ತಡ, ವಿಪ್ ಅನ್ವಯದ ನಡುವಿನ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವ್ಯಾಪ್ತಿಗೆ ವಿಪ್ ಒಳಪಡುವ, ಪಡದಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ವಿಧಾನಸಭೆ ಕಲಾಪ ವೇಳೆ ಗವರ್ನರ್, ಸಿಎಂ ಮತ್ತು ಸ್ಪೀಕರ್‍ಗೆ ನಿರ್ದೇಶನ ನೀಡುವ ಅಧಿಕಾರದ ಬಗ್ಗೆ ಚರ್ಚೆ ಸುಪ್ರೀಂ ಚರ್ಚೆ ಮಾಡಬಹುದು. ಜೊತೆಗೆ ವಿಧಾನಸಭೆ ಕಲಾಪ ಮತ್ತು ರಾಜ್ಯಪಾಲರ ಹಕ್ಕುಗಳ ಬಗ್ಗೆ ವಿಸ್ತೃತ ವಿಚಾರಣೆ ನಡೆಸಬಹುದು.

assembly 1

ಪಕ್ಷೇತರ ಶಾಸಕರ ಅರ್ಜಿಯಲ್ಲಿ ಏನಿದೆ?
ಇಬ್ಬರು ಪಕ್ಷೇತರು ಸೇರಿ ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ. ಆದ್ದರಿಂದ ಹಾಲಿ ಸರ್ಕಾರಕ್ಕೆ ಬಹುಮತ ಇಲ್ಲ, ಹೀಗಾಗಿ ವಿಶ್ವಾಸಮತಯಾಚನೆಗೆ ಸೂಚನೆ ನೀಡಿ. ಇಂದೇ ಬಹುಮತ ಸಾಬೀತಿಗೆ ಸೂಚನೆ ನೀಡಿ. ಬಹುಮತ ಸಾಬೀತು ಪಡಿಸುವುದನ್ನು ಸುದೀರ್ಘ ಪ್ರಕ್ರಿಯೆಯನ್ನಾಗಿ ಮಾಡಲಾಗುತ್ತಿದೆ. ಜೊತೆಗೆ ವಿಪ್ ಸೇರಿ ಬೇರೆ ಬೇರೆ ಕಾರಣಗಳನ್ನು ನೀಡಿ ವಿಶ್ವಾಸಮತ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ರಾಜ್ಯಪಾಲರು ವಿಶ್ವಾಸಮತಯಾಚನೆಗೆ ಡೆಡ್‍ಲೈನ್ ಸೂಚಿಸಿದರು ಸರ್ಕಾರ ಅದನ್ನು ಪಾಲಿಸಿಲ್ಲ. ಸುಪ್ರೀಂಕೋರ್ಟ್ ನೆಪ ಇಟ್ಟುಕೊಂಡು ಕಾಲಹರಣ ಮಾಡಲು ಯತ್ನ ನಡೆದಿದೆ. ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅತೃಪ್ತ ಶಾಸಕರು ಅರ್ಜಿಯಲ್ಲಿ ಸೂಚಿಸಿದ್ದಾರೆ.

DEAD LINE

ಅಷ್ಟೇ ಅಲ್ಲದೇ ಬಿಜೆಪಿ ಸರ್ಕಾರ ರಚನೆ ವೇಳೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿತ್ತು. 15 ದಿನ ಅವಕಾಶ ನೀಡಿದ್ದ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿ ಬಹುಮತ ಸಾಬೀತಿಗೆ ಸುಪ್ರೀಂ ಸೂಚಿಸಿತ್ತು. ಅದೇ ರೀತಿ ಮಧ್ಯಂತರ ಆದೇಶವನ್ನು ಈ ಪ್ರಕರಣದಲ್ಲಿ ನೀಡಬೇಕು. ಹೊಸದಾಗಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದರು ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಹಿಂದೆ ಶಾಸಕರನ್ನು ಅನರ್ಹತೆ ಮಾಡುವ ತಂತ್ರವೂ ಇದೆ. ಪಕ್ಷೇತರ ಶಾಸಕರಾದ ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಆದಷ್ಟು ಬೇಗ ವಿಶ್ವಾಸ ಮತಯಾಚನೆಗೆ ಮಾಡುವಂತೆ ಆದೇಶ ನೀಡಿ ಎಂದು ಶಾಸಕರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

TAGGED:bengaluruConfidentiality VoteMLA'sSupreme Courtಪಬ್ಲಿಕ್ ಟಿವಿಬೆಂಗಳೂರುವಿಚಾರಣೆವಿಶ್ವಾಸ ಮತಯಾಚನೆಶಾಸಕರುಸುಪ್ರೀಂಕೋರ್ಟ್
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

CSK 3
Cricket

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌

Public TV
By Public TV
6 hours ago
Rayareddy
Districts

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

Public TV
By Public TV
7 hours ago
big bulletin 14 april 2026 part 1
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-1

Public TV
By Public TV
7 hours ago
big bulletin 14 april 2026 part 2
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-2

Public TV
By Public TV
7 hours ago
big bulletin 14 april 2026 part 3
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-3

Public TV
By Public TV
7 hours ago
IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?