ನವದೆಹಲಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ ಕೊರೊನಾ ಲಸಿಕೆ ನೀಡುವುದಿಲ್ಲ. ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.
Advertisement
ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗುತ್ತಿದೆ ಮತ್ತು ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ ಎಂದು ಇವಾರ ಫೌಂಡೇಶನ್ ಎಂಬ ಎನ್‍ಜಿಒ ಒಂದು ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ. ಲಸಿಕೆ ನೀಡುವುದು ಮತ್ತು ಲಸಿಕೆ ಪಡೆದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವ ಕ್ರಮವನ್ನು ಎಲ್ಲಿಯೂ ಜಾರಿಗೆ ತಂದಿಲ್ಲ. ಜನರ ಹಿತಾಸಕ್ತಿಯಿಂದ ಮತ್ತು ಕೊರೊನಾ ಸೋಂಕು ಎಲ್ಲೆಡೆ ಹರಡುವುದನ್ನು ತಪ್ಪಿಸಲು ಲಸಿಕೆ ಪಡೆಯುವುದು ಮತ್ತು ಲಸಿಕೆ ಪ್ರಮಾಣಪತ್ರ ಹೊಂದಿರುವುದನ್ನು ಆರೋಗ್ಯ ಸಚಿವಾಲಯ ಅಭಿಯಾನ ಕೈಗೊಂಡಿದೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್
Advertisement
Advertisement
ಒತ್ತಾಯದಿಂದ ಯಾರ ಮೇಲೂ ಅದನ್ನೂ ಹೇರಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ. ಎಲ್ಲರೂ ಲಸಿಕೆ ಪಡೆದು ಕೋವಿಡ್ ಸೋಂಕಿನ ವಿರುದ್ಧ ಹೋರಾಡುವಂತೆ ಸೂಚಿಸಲಾಗಿದೆ. ಆದರೆ ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಕೊರೊನಾ, ಓಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಭಯಭೀತರಾಗಿರುವ ಜನರು ಮೊದಲು ಮತ್ತು 2ನೆ ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪಾಸಿಟಿವ್ ಇದ್ದರೂ ಶಬರಿಮಲೆಗೆ ತೆರಳ್ತಿದ್ದ 30 ಮಂದಿ ಮೇಲೆ ಎಫ್‍ಐಆರ್