CoronaDistrictsKarnatakaLatestMain PostMandya

ಪಾಸಿಟಿವ್ ಇದ್ದರೂ ಶಬರಿಮಲೆಗೆ ತೆರಳ್ತಿದ್ದ 30 ಮಂದಿ ಮೇಲೆ ಎಫ್‍ಐಆರ್

ಮಂಡ್ಯ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಜನರಿಂದ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಪ್ರತಿನಿತ್ಯ 700-800 ಕೇಸ್‍ಗಳು ದಾಖಲಾಗ್ತಿದ್ರು ಸಹ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಕೋವಿಡ್ ಪಾಸಿಟಿವ್ ಇದ್ರು ಸಹ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರಗಿದೆ.

ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದ 30 ಮಂದಿ ಆರೋಗ್ಯ ಇಲಾಖೆ ಕಣ್ತಪ್ಪಿಸಿ ಶಬರಿಮಲೆ ಯಾತ್ರೆಗೆ ಹೊರಟಿದ್ದವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಮಂಚೀಬೀಡು ಗ್ರಾಮದ 30 ಮಂದಿ ಕೊರೋನಾ ಪರೀಕ್ಷೆ ಮಾಡಿಸಿ ವರದಿ ಬರುವ ಮುನ್ನ ಶಬರಿಮಲೆ ಯಾತ್ರೆಗೆ ಮುಂದಾಗಿದ್ದಾರೆ. ವರದಿ ಬರುವವರೆಗೆ ಎಲ್ಲಿಯೂ ತೆರಳದಂತೆ ಸೂಚನೆ ನೀಡಿದ್ದ ಆರೋಗ್ಯ ಇಲಾಖೆ ಕಣ್ತಪ್ಪಿಸಿ ಈ 30 ಮಂದಿ ಯಾತ್ರೆಗೆ ತೆರಳಿದ್ದಾರೆ.

ಪರೀಕ್ಷೆ ಮಾರನೆ ದಿನ ಬೆಳ್ಳಂಬೆಳಗ್ಗೆ 30 ಮಂದಿ ಯಾತ್ರೆಗೆ ತೆರಳಿದ್ದರೆ ಇತ್ತ, 30 ಜನರ ವರದಿ ಪೈಕಿ 15 ಮಂದಿಗೆ ಸೋಂಕು ದೃಢವಾಗಿದೆ. ಪಾಸಿಟಿವಿಟಿ ವಿಚಾರ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿ ಪೊಲೀಸರ ಸಹಾಯ ಪಡೆದು ಸೋಂಕಿತ ಯಾತ್ರಾರ್ಥಿಗಳನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಉಸಿರುಗಟ್ಟಿ ಸಾವು

ಗುಂಡ್ಲುಪೇಟೆ ಬೇಗೂರು ಚೆಕ್ ಪೋಸ್ಟ್ ಬಳಿ ಯಾತ್ರೆಗಳನ್ನ ತಡೆದು ಕೆಆರ್‍ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸರು ಕರೆತಂದಿದ್ದಾರೆ. ಪಾಸಿಟಿವ್ ಇದ್ದರೂ ನಿಯಮ ಉಲ್ಲಂಘಿಸಿ ಯಾತ್ರೆ ಕೈಗೊಂಡ 30 ಜನರ ವಿರುದ್ಧ ಕೆಆರ್‍ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button