ನವದೆಹಲಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ರಾಜಸ್ಥಾನದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಕಾನೂನನ್ನು ಸುಪ್ರೀಂ ಕೋರ್ಟ್ (Supreme Court) ಅನುಮೋದಿಸಿದೆ.
ರಾಜ್ಯದ 1989 ರ ಕಾನೂನು ಇದಾಗಿದೆ. ಈ ಕಾನೂನಿಗೆ ಸುಪ್ರೀಂ ಕೋರ್ಟ್‌ನ ಅನುಮೋದನೆಯ ಮುದ್ರೆ ಸಿಕ್ಕಿದೆ. ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ನಿಯಮವು ತಾರತಮ್ಯರಹಿತವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕಿರಣ್ ನವಗಿರೆ ಸ್ಫೋಟಕ ಅರ್ಧಶತಕ – ಬಲಿಷ್ಠ ಮುಂಬೈ ವಿರುದ್ಧ ಯಪಿಗೆ 7 ವಿಕೆಟ್‌ಗಳ ಜಯ
Advertisement
Advertisement
ಇದು ನೀತಿಯ ವ್ಯಾಪ್ತಿಗೆ ಬರುತ್ತದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಫೆಬ್ರವರಿ 20 ರಂದು ಆದೇಶದಲ್ಲಿ ತಿಳಿಸಿದೆ.
Advertisement
2022, ಅಕ್ಟೋಬರ್ 12ರ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪೀಠವು ಎತ್ತಿಹಿಡಿದಿದೆ. ಮಾಜಿ ಸೈನಿಕ ರಾಮಜಿ ಲಾಲ್ ಜಾಟ್ ಅವರ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ
Advertisement
2017 ರ ಜನವರಿಯಲ್ಲಿ ರಕ್ಷಣಾ ಸೇವೆಗಳಿಂದ ನಿವೃತ್ತರಾದ ನಂತರ ರಾಮಜಿ ಲಾಲ್, 2018ರ ಮೇ ತಿಂಗಳಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರಿಂದ ಅವರ ಅರ್ಜಿಯನ್ನು ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು, 1989 ರ ಅಡಿಯಲ್ಲಿ ತಿರಸ್ಕರಿಸಲಾಯಿತು.
ಇದನ್ನು ಪ್ರಶ್ನಿಸಿ ರಾಮಜಿ ಲಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಪಂಚಾಯತ್ ಚುನಾವಣೆಗಳ ಸ್ಪರ್ಧಿಗಳಿಗೆ ಕುಟುಂಬ ಯೋಜನೆಯನ್ನು ಉತ್ತೇಜಿಸಲು ಇದೇ ರೀತಿಯ ನಿಯಮಗಳನ್ನು ಈ ಹಿಂದೆ ಅನುಮೋದಿಸಿತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್ – ಅಖಿಲೇಶ್ ಯಾದವ್‌ಗೆ ಸಿಬಿಐ ಸಮನ್ಸ್