ನವದೆಹಲಿ: ಸಿಎಂ ವಿರುದ್ಧದ ಮುಡಾ ಪ್ರಕರಣದಲ್ಲಿ ಪತ್ನಿ ಪಾರ್ವತಿಯವರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಇಡಿ-ಬಿಜೆಪಿ (ED, BJP) ಪಾಲುದಾರಿಕೆಯ ನಕಲಿ ಪ್ರಚಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಸೃಷ್ಟಿಸಿತ್ತು. ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿತ್ತು. ಸತ್ಯ ಗೆದ್ದಿದೆ, ಸತ್ಯಮೇವ ಜಯತೆ. ಇದನ್ನೂ ಓದಿ: ಮುಡಾ ಕೇಸ್ | ಸಿಎಂ ಪತ್ನಿ ವಿಚಾರಣೆ ರದ್ದು – ನಿಮ್ಮನ್ಯಾಕೆ ರಾಜಕೀಯಕ್ಕೆ ಬಳಕೆ ಮಾಡ್ತಾರೆ?: ಇ.ಡಿಗೆ ಸುಪ್ರೀಂ ಛೀಮಾರಿ
ಸಿದ್ದರಾಮಯ್ಯ ಮತ್ತು ಅವರ ಪತ್ನಿ ವಿರುದ್ಧ ಮುಡಾ ಹಗರಣ ಆರೋಪದಲ್ಲಿ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದೆ. ದುರುದ್ದೇಶಪೂರ್ವಕವಾಗಿ ಸಿಎಂ ವಿರುದ್ಧ ಮುಡಾ ಕುರಿತು ಸುಳ್ಳು ಆರೋಪಗಳನ್ನು ಹೊರಿಸಿತ್ತು. ಇದಕ್ಕೂ ಮುನ್ನ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿತ್ತು. ಈ ಮೂಲಕ ಇಡಿ-ಬಿಜೆಪಿ ಪಾಲುದಾರಿಕೆಯ ನಕಲಿ ಪ್ರಚಾರವನ್ನು ತಿರಸ್ಕರಿಸಿ ರದ್ದುಗೊಳಿಸಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜಯಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್ ಗಂಭೀರ ಆರೋಪ