ನವದೆಹಲಿ: ಮಗಳ ಹೆರಿಗೆ (Delivery) ಹಿನ್ನೆಲೆ ಬಳ್ಳಾರಿಗೆ (Bellary) ತೆರಳಲು ಅನುಮತಿ ಕೋರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ (Janardhana Reddy) ಸುಪ್ರೀಂಕೋರ್ಟ್ (Supreme Court) ಒಂದು ತಿಂಗಳ ಕಾಲಾವಕಾಶ ನೀಡಿದೆ. ಇಂದು ಈ ಬಗ್ಗೆ ತೀರ್ಪು ನೀಡಿದ ನ್ಯಾ. ಎಂ.ಆರ್.ಶಾ ಅವರ ಪೀಠ, ನವೆಂಬರ್ 6 ರ ವರೆಗೆ ಭೇಟಿ ನೀಡಲು ಮತ್ತು ವಾಸ್ತವ್ಯ ಹೂಡಲು ಅನುಮತಿ ನೀಡಿದೆ.
ಮಗಳ 2ನೇ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅನುಮತಿ ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. 2 ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
Advertisement
Advertisement
ಸಿಬಿಐ ಆಕ್ಷೇಪದ ಬಳಿಕ ಕನಿಷ್ಠ 1 ತಿಂಗಳ ಕಾಲವಾದರೂ ಅನುಮತಿ ನೀಡಬೇಕು ಮತ್ತು ನನ್ನ ಮೇಲೆ ಪೊಲೀಸ್ ನಿಗಾ ಇಡಬಹುದು ಎಂದು ಜನಾರ್ದನ ರೆಡ್ಡಿ ಕೇಳಿಕೊಂಡಿದ್ದರು. ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಈ ಆದೇಶವನ್ನು ಇಂದು ಪ್ರಕಟಿಸಿದೆ. ಇದನ್ನೂ ಓದಿ: ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದ ಹಂಸಲೇಖ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
Advertisement
Advertisement
ಬಳ್ಳಾರಿಗೆ ತೆರಳಲು ಅನುಮತಿ ನೀಡಿದ್ದಲ್ಲದೇ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರತಿನಿತ್ಯ ವಿಚಾರಣೆಯನ್ನು ನಡೆಸುವಂತೆ ಮತ್ತು ನವೆಂಬರ್ 9 ರಿಂದ 6 ತಿಂಗಳಲ್ಲಿ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಲು ಕೇಳಿ ಹಂತದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಈ ಹಿಂದೆ ಬಳ್ಳಾರಿ ತೆರಳಲು ನಿರ್ಬಂಧಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ