‘ಪಠಾಣ್'(Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಜವಾನ್ (Jawan) ಚಿತ್ರ ಕೂಡ ಗೆಲ್ಲಲೇಬೇಕು ಎಂದು ನಟ ಶಾರುಖ್ ಖಾನ್ (Sharukh Khan) ಪಣ ತೊಟ್ಟಿದ್ದಾರೆ. ಜವಾನ್ ಸಿನಿಮಾ ಸೆ.7ಕ್ಕೆ ತೆರೆಗೆ ಬರುವ ಮುನ್ನ ವೈಷ್ಣೋದೇವಿ ದೇವಾಲಯಕ್ಕೆ(Vaishnodevi Temple) ಆಗಸ್ಟ್ 29ರಂದು ಮಧ್ಯರಾತ್ರಿ ಭೇಟಿ ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಜವಾನ್ (Jawan) ರಿಲೀಸ್‌ಗೆ ಒಂದು ವಾರ ಬಾಕಿಯಿದೆ. ಇದೇ ಸೆ.7ಕ್ಕೆ ಪಠಾಣ್ ಸ್ಟಾರ್ ಶಾರುಖ್ ನಟನೆಗೆ ಜವಾನ್ ತೆರೆಗೆ ಬರಲು ಸಜ್ಜಾಗಿದೆ.ಶಾರುಖ್ ಖಾನ್ ಅವರು ಜಮ್ಮ ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಗೆ ಭೇಟಿ ನೀಡಿದ್ದಾರೆ. ಅದೂ ಮಧ್ಯರಾತ್ರಿ ಸಂದರ್ಭದಲ್ಲಿ ಅನ್ನೋದು ವಿಶೇಷ. ಈ ವಿಡಿಯೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ
View this post on Instagram
ಶಾರುಖ್ ಖಾನ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಆದಾಗ್ಯೂ ಅವರ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಅಪಾರ ಭಕ್ತಿ ಇದೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂಗಳ ಪ್ರಮುಖ ದೇವಾಲಯವಾದ ವೈಷ್ಣೋ ದೇವಿಗೆ ಶಾರುಖ್ ಖಾನ್ ಅವರು ಮಂಗಳವಾರ (ಆಗಸ್ಟ್ 29) ರಾತ್ರಿ 11:40ರ ಸಮಯದಲ್ಲಿ ಭೇಟಿ ನೀಡಿದ್ದಾರೆ. ತಮ್ಮ ಗುರುತು ಸಿಗದಂತೆ ನಟ ಎಂಟ್ರಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದರು.
ಶಾರುಖ್ ಖಾನ್ ಅವರು ವೈಷ್ಣೋ ದೇವಿ ಟೆಂಪಲ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರತಿ ಸಿನಿಮಾದ ರಿಲೀಸ್‌ಗೂ ಮುನ್ನ ಶಾರುಖ್ ಇಲ್ಲಿ ಭೇಟಿ ನೀಡುತ್ತಾರೆ. ಶಾರುಖ್ ಖಾನ್ ಅವರು ಹಿಂದೂ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವುದನ್ನು ಅನೇಕರು ಶ್ಲಾಘಿಸಿದ್ದಾರೆ. ಶಾರುಖ್ ಖಾನ್ ಭಕ್ತಿ ನಿಜಕ್ಕೂ ಮೆಚ್ಚುವಂಥದ್ದು ಎಂದಿದ್ದಾರೆ. ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]