ಬೆಂಗಳೂರು: ಹೊಸ ವರ್ಷ ಸಂಭ್ರಮದಲ್ಲಿ ನಗರದಲ್ಲಿ ಆಯೋಜನೆಗೊಂಡಿರುವ `ಸನ್ನಿ ನೈಟ್ಸ್’ ವಿರುದ್ಧ ಸಿಲಿಕಾನ್ ಸಿಟಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.
ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಕ್ರೋಶವನ್ನು ವ್ಯಕ್ತಪಡಿಸಿದೆ. ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಪೊರಕೆ ಹಿಡಿದು ಸನ್ನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಟೈಮ್ಸ್ ಕ್ರಿಯೆಷನ್ ಡಿಸೆಂಬರ್ 31 ರಂದು ರಾತ್ರಿ ಮಾನ್ಯತಾ ಟೆಕ್ ಪಾರ್ಕ್ ವೈಟ್ ಆರ್ಕಿಡ್‍ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿದೆ. ಇದು ನಮ್ಮ ನೆಲದ ಸಂಸ್ಕೃತಿ ವಿರೋಧ. ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ಆಯೋಜನೆಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಕರವೇ ಯುವ ಸೇನೆ ಕ್ಯಾತೆ ತೆಗೆದಿದ್ದು, ಎಚ್ಚರಿಕೆಯನ್ನು ನೀಡಿತ್ತು. `ಸನ್ನಿ ನೈಟ್ಸ್’ ನಮ್ಮ ಸಂಸ್ಕೃತಿ ಅಲ್ಲ. ಬೆತ್ತಲೆ ನಟಿ ಇಲ್ಲಿ ಬಂದು ಸೊಂಟ ಕುಣಿಸಿ, ಡ್ಯಾನ್ಸ್ ಮಾಡಿ ನಮ್ಮ ಯುವಜನರನ್ನು ಹಾಳು ಮಾಡೋದು ಬೇಡ ಅಂತಾ ಕರವೇ ಯುವ ಸೇನೆ ಸನ್ನಿ ಎಂಟ್ರಿಗೆ ವಿರೋಧಿಸಿ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದ್ದರು.
ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು ಹಾಕಿದ್ದು, ಇದರ ಜೊತೆಗೆ ಕಾರ್ಯಕ್ರಮದ ಆಯೋಜಕರಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದರು. ಸನ್ನಿ ಕಾರ್ಯಕ್ರಮ ನಡೆಸಿದರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದರು.
https://www.youtube.com/watch?v=05Jkbnw4rXE
https://www.youtube.com/watch?v=naANm0aEdZs