ಹೊಸಪೇಟೆಗೆ ನಾಳೆ ಹಾಟ್ ಬೆಡಗಿ ಸನ್ನಿ ಲಿಯೋನ್ ಆಗಮನ: ಏನ್ ಗುರೂ ವಿಶೇಷ?

Public TV
1 Min Read
sunny leone 3

ಮಾದಕ ಬೆಡಗಿ ಸನ್ನಿ ಲಿಯೋನ್ ಕರ್ನಾಟಕಕ್ಕೆ ಬಂದರೆ, ಸಾಮಾನ್ಯವಾಗಿ ಬೆಂಗಳೂರಿಗೆ ಬಂದು ಹಾಗೆಯೇ ವಾಪಸ್ಸಾಗುತ್ತಿದ್ದರು. ಈ ಬಾರಿ ಅವರು ಹೊಸಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಳೆಯೇ ಸನ್ನಿ ಲಿಯೋನ್ ಹೊಸಪೇಟೆಗೆ ಆಗಮಿಸುತ್ತಿದ್ದಾರೆ. ಈ ಬಾರಿ ಸನ್ನಿ ಬರುತ್ತಿರುವುದು ಯಾವುದೇ ಶೂಟಿಂಗ್ ಅಥವಾ ಸಿನಿಮಾ ಸಂಬಂಧಿ ಕಾರ್ಯಕ್ರಮಕ್ಕೆ ಅಲ್ಲ ಎನ್ನುವುದು ವಿಶೇಷ.

sunny leone 1

ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಆಗಸ್ಟ್ 15ರಂದು ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ ಸಮಿತಿಯಿಂದ ಗುಡ್ಡ ಹತ್ತುವ ಮತ್ತು ಓಡುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಗಳಿಗೆ ಸನ್ನಿ ಲಿಯೋನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್‌ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

sunny leone 4

ವಿಜಯನಗರ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯು ಈ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಈ ಸಮಿತಿಯ ಅಧ್ಯಕ್ಷ ಟಿ. ವೆಂಕಟೇಶ್ ಅವರೇ ಖುದ್ದಾಗಿ ಸನ್ನಿ ಲಿಯೋನ್ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಹಾಗಾಗಿ ಆಗಸ್ಟ್ 15 ರಂದು ಸನ್ನಿ ಲಿಯೋನ್ ಹೊಸಪೇಟೆಗೆ ಆಗಮಿಸಿ, ಬಿಸಿಲುನಾಡಿನ ಟೆಂಪರೇಚರ್ ಅನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *