ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

Advertisements

ನ್ನಿ ಲಿಯೋನ್ ದತ್ತು ಮಗುವಿನ ಕುರಿತು ಮಾಡಿದ ಟ್ರೋಲ್ ಗೆ ನಟಿ ಗರಂ ಆಗಿದ್ದಾರೆ. “ನನ್ನಲ್ಲೂ ತಾಯ್ತನವಿದೆ. ಯಾವ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವ ಕಾಳಜಿ ಇದೆ. ನೀವು ಟ್ರೋಲ್ ಮಾಡುತ್ತಿರುವ ನನ್ನ ಮಗಳು ನಿಶಾ, ನಮ್ಮ ಮನೆಯ ದೇವತೆ. ಆಕೆಯೇ ನನ್ನ ಅರಮನೆಯ ರಾಜಕುಮಾರಿ. ಯಾವ ಮಗುವಿಗೂ ನಾನು ತಾರತಮ್ಯ ಮಾಡಲ್ಲ” ಎಂದು ಖಡಕ್ಕಾಗಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

Advertisements

ನಿಶಾಳನ್ನು ಸನ್ನಿ ಲಿಯೋನ್ ದತ್ತು ಪಡೆದ ನಂತರ ಮತ್ತೆರಡು ಮಗುವನ್ನು ಬಾಡಿಗೆ ತಾಯಿಯಿಂದ ಪಡೆದುಕೊಂಡಿದ್ದರು ಸನ್ನಿ. ಆ ಮಗುವಿನ ಪಾಲನೆ ಪೋಷಣೆಯಲ್ಲಿ ನಿಶಾಳನ್ನು ಮರೆಯುತ್ತಿದ್ದಾರೆ ಎನ್ನುವ ಆರೋಪ ಟ್ರೊಲಿಗರದ್ದು. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

Advertisements

ಕೆಲ ದಿನಗಳ ಹಿಂದೆ ನಿಶಾಳನ್ನು ಕೆಳಗಿ ಇಳಿಸಿ, ಬಾಡಿಗೆ ತಾಯಿಯಿಂದ ಪಡೆದ ಎರಡೂ ಮಕ್ಕಳನ್ನು ಎತ್ತಿಕೊಂಡು ಸನ್ನಿ ಮೆಟ್ಟಿಲು ಏರಿದ್ದರು. ಆ ವಿಡಿಯೋ ಭಾರೀ ವೈರಲ್ ಆಗಿತ್ತು. ದತ್ತು ಮಗುವನ್ನು ನೀವು ಪಡೆದದ್ದು ಕೇವಲ ಪ್ರಚಾರಕ್ಕಾಗಿ. ಬಾಡಿಗೆ ತಾಯಿಯಿಂದ ಪಡೆದ ಮಕ್ಕಳಷ್ಟೇ ನಿನ್ನ ಮಕ್ಕಳು. ಅವುಗಳಿಗೆ ಮಾತ್ರ ಪ್ರೀತಿ ಕೊಡುತ್ತಿದ್ದೀಯಾ ಎಂದು ಅನೇಕರು ಟ್ರೋಲ್ ಮಾಡಿದ್ದರು. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

Advertisements

ನಿಶಾಳ ಬಗ್ಗೆ ಪದೇ ಪದೇ ಟ್ರೋಲ್ ಆಗುತ್ತಿರುವುದಕ್ಕೆ ಸನ್ನಿ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಮನೆಗೆ ಬಂದ ಮೊದಲ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಲ್ಲ. ಅದು ನನ್ನದೇ ಮಗು. ಅದಕ್ಕೆ ಸಿಗಬೇಕಾದ ಪ್ರೀತಿ ಯಾವಾಗಲೂ ಸಿಗುತ್ತದೆ. ಕನಸಿನಲ್ಲೂ ನಿಶಾಳ ಪ್ರೀತಿಗೆ ಕಡಿಮೆ ಮಾಡಲ್ಲ ಎಂದು ಸನ್ನಿ ಪದೇ ಪದೇ ಹೇಳುತ್ತಾರೆ. ಆದರೂ, ಟ್ರೋಲ್ ಗೆ ಆಹಾರವಾಗುತ್ತಾರೆ.

Advertisements
Exit mobile version