ಮುಂಬೈ: ಬಾಲಿವುಡ್ ಮಾದಕ ಚೆಲುವೆ, ಬೇಬಿ ಡಾಲ್ ಸನ್ನಿ ಲಿಯೋನ್ ಏನೇ ಪೋಸ್ಟ್ ಮಾಡಿದ್ರೂ ಅದು ಕ್ಷಣಾರ್ಧದಲ್ಲೇ ವೈರಲ್ ಆಗುತ್ತದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ನೋಡಿದ್ರೆ ಸನ್ನಿ ಲಿಯೋನ್ ಏನ್ ಬೇಕಾದ್ರೂ ಮಾಡಬಹುದು ಎಂದು ಹೇಳುತ್ತೀರಿ.
ವಿಡಿಯೋದಲ್ಲಿ ಸನ್ನಿ ಲಿಯೋನ್ ಮರ ಹತ್ತಿ ಅದರ ರಂಬೆಯ ಮೇಲೆ ರಿಲ್ಯಾಕ್ಟ್ ಮೂಡ್ ಗೆ ಜಾರಿದ್ದಾರೆ. ಅಲ್ಲಿದ್ದವರು ಏನ್ ಮಾಡುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮರ ಹತ್ತಿ ಮೂಡ್ ಪ್ರೆಶ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಆಗ ಕೆಲವರು ಸನ್ನಿ ಏನ್ ಬೇಕಾದರೂ ಮಾಡಬಹುದು ಎಂದು ಮಾತನಾಡಿಕೊಂಡಿದ್ದಾರೆ.
Advertisement
Advertisement
ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದರೆ ದೇಹಕ್ಕೆ ದಣಿವು ಆಗುತ್ತದೆ. ಕೆಲಸದ ಮಧ್ಯೆ ಬ್ರೇಕ್ ಸಿಕ್ಕಾಗ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವದರಿಂದ ಮೈಂಡ್ ಫ್ರೆಶ್ ಆಗುತ್ತೆ ಎಂದು ಈ ಹಿಂದೆ ಸನ್ನಿ ಲಿಯೋನ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೇ ರೀತಿ ಸನ್ನಿ ಲಿಯೋನ್ ಕೆಲಸದ ನಡುವೆ ಬ್ರೇಕ್ ಸಿಕ್ಕಾಗ ಸಹ ಕಲಾವಿದರೊಂದಿಗೆ ತಮಾಷೆಯಲ್ಲಿ ತೊಡಗಿಕೊಂಡಿರುತ್ತಾರೆ.
Advertisement