ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಮೇ 13ರಕ್ಕೆ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸನ್ನಿ ಲಿಯೋನ್ ಮಾತ್ರ ತಮ್ಮ ಹುಟ್ಟು ಹಬ್ಬ ಆಚರಿಸುವುದಲ್ಲ, ನೆಚ್ಚಿನ ನಟಿಯ ಬರ್ತಡೇಯನ್ನು ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಬಳಗ ಕೂಡ ಅದ್ದೂರಿಯಾಗಿ ಆಚರಿಸಿತ್ತು. ಇದೀಗ ವಿಷ್ಯ ತಿಳಿದ ನಟಿ ಸನ್ನಿ ಮಂಡ್ಯ ಹುಡುಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.
ಸನ್ನಿ ಹುಟ್ಟು ಹಬ್ಬದಂದು ಅಭಿಮಾನಿಗಳು ರಕ್ತದಾನ ಶಿಬಿರ, ಬಾಡೂಟವನ್ನು ಆಯೋಜನೆ ಮಾಡಿ ಮಂಡ್ಯ ಹುಡುಗರು ಸುದ್ದಿ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಬಳಗದ ಕಾರ್ಯಕ್ಕೆ ಸನ್ನಿ ಫಿದಾ ಆಗಿದ್ದಾರೆ. ಮಾಧ್ಯಮವೊಂದರಲ್ಲಿ ಸುದ್ದಿಯನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್
View this post on Instagram
ತಮ್ಮ ಖಾತೆಯಲ್ಲಿ ಸನ್ನಿ, ಓ ಮೈ ಗಾಡ್, ನನ್ನಿಂದ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ಕೂಡ ರಕ್ತದಾನ ಮಾಡಲು ಹೋಗುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.