ಬಾಲಿವುಡ್ ನಟಿ ಸನ್ನಿ ಲಿಯೋನ್ ಎನ್ನುವ ಹೆಸರೇ ಪಡ್ಡೆಗಳಿಗೆ ಕಿಕ್ ಎಂದರೆ ತಪ್ಪಾಗಲಾರದು. ಸನ್ನಿ ಲಿಯೋನ್ ಎನ್ನುವ ಹೆಸರು ಕೇಳುತ್ತಿದ್ದಂತೆ ನೆಟ್ಟಿಗರು ಮತ್ತು ತುಂಡೈಕ್ಳು ಕಿವಿ ನೆಟ್ಟಗೆ ಆಗುತ್ತದೆ. ಸನ್ನಿ ಸಿನಿಮಾಗಳಲ್ಲಿ ಬೋಲ್ಡ್ ಅವತಾರದಲ್ಲಿ ಸೊಟ ಬಳುಕಿಸುವ ಮೂಲಕ ಸುದ್ದಿಯಾಗುತ್ತಿದ್ದರು. ಆದರೆ ಈ ಮಾದಕ ನೋಟದ ಚಲುವೆ ಬ್ಯಾಸ್ಕೆಟ್ಬಾಲ್ ಆಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತೆರೆ ಮೇಲೆ ಸೊಂಟ ಬಳುಕಿಸುವ ಈ ಮುದ್ದಾದ ಚೆಲುವೆಯು ಪತಿ ಜೊತೆಗೆ ಬ್ಯಾಸ್ಕೆಟ್ಬಾಲ್ ಆಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಸ್ ನಂತೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸನ್ನಿ ತೊಟ್ಟಿರುವ ಕೆಂಪು ಸೀರೆಗೆ ನೆಟ್ಟಿಗರು ಮಾತ್ರವಲ್ಲ ಅವರ ಪತಿಯೇ ಫಿದಾ ಆಗಿದ್ದಾರೆ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ
View this post on Instagram
ಪತಿ ಡೇನಿಯಲ್ ವೆಬ್ಬರ್ ಅವರೊಂದಿಗೆ ಬಾಸ್ಕೆಟ್ಬಾಲ್ ಆಡುತ್ತಿರುವ ಕ್ಲಿಪ್ನ್ನು ಸೋಶಿಯಲ್ ಮೀಡಿಯಾದಲ್ಲಿ, ನಿಮ್ಮ ಉತ್ತಮ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ಶೀರ್ಷಿಕೆ ಕೊಟ್ಟು ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ ಹಿನ್ನೆಲೆಯಾಗಿ ಜನಪ್ರಿಯ ಹಾಡಾಗಿರುವ ‘ಯೇ ಲಡ್ಕಾ ಹೈ ದೀವಾನಾ’ ಸಾಂಗ್ ಜೋಡಿಸಿದ್ದಾರೆ.
ಈ ವೀಡಿಯೋದಲ್ಲಿ ಸನ್ನಿ ಕೆಂಪು ಬಣ್ಣದ ಸೀರೆ ಸ್ಲೀವ್ಲೆಸ್ ಬ್ಲೌಸ್ ಮತ್ತು ಫ್ಲಾಟ್ ಚಪ್ಪಲಿ ಧರಿಸಿರುವುದನ್ನು ಕಾಣಬಹುದು. ಸನ್ನಿ ಆಟದಲ್ಲಿ ಡೇನಿಯಲ್ ಸೋಲಿಸಲು ತುಂಬಾ ಕಷ್ಟ ಪಡುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ. ಸನ್ನಿ ಸಿನಿಮಾ ಚಿತ್ರೀಕರಣಕ್ಕಾಗಿ ತಂಡದೊಂದಿಗೆ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.