ನವದೆಹಲಿ: ಮಾದಕ ಚೆಲವೆ ಸನ್ನಿ ಲಿಯೋನ್ ಲಾಕ್ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಬಹುತೇಕ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ನಿತ್ಯದ ಚಟುವಟಿಕೆಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಮನೆ ಕೆಲಸ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಮಾದಕ ಶೈಲಿಯಲ್ಲೇ ಮನೆ ಒರೆಸುವ ಮೂಲಕ ಸುದ್ದಿಯಾಗಿದ್ದಾರೆ. ಮಾಪ್ ಹಿಡಿದು ಡ್ಯಾನ್ಸ್ ಮಾಡುತ್ತ. ಹುಚ್ಚೆಬ್ಬಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಕಮೆಂಟ್ ಮಾಡುತ್ತಿದ್ದಾರೆ. ಐ ವಾಂಟ್ ಮೋರ್ ಲಾಂಗ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸನ್ನಿ ನೆಲ ಒರೆಸುವ ವಿಡಿಯೋ ನೋಡಿದ ಅಭಿಮಾನಿಗಳಿಗೆ ಕನಸಿನಲ್ಲೂ ಇದೇ ಚಿತ್ರಣ ಕಾಡುವುದು ಖಂಡಿತ. ಆ ರೀತಿ ಮತ್ತೇರಿಸುವಂತೆ ಸನ್ನಿ ಮಾಪ್ ಹಿಡಿದು ಕುಣಿದಿದ್ದಾರೆ.
ಅಂದಹಾಗೆ ಸನ್ನಿ ಲಿಯೋನ್ ಲಾಕ್ಡೌನ್ ಸಮಯದಲ್ಲಿ ಅಭಿಮಾನಿಗಳಿಗಾಗಿ ಕಾರ್ಯಕ್ರಮವನ್ನೂ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಗಣ್ಯ ವ್ಯಕ್ತಿಗಳ ಲೈವ್ ವಿಡಿಯೋ ಮಾಡಿಸಿ ಮನರಂಜನೆ ನೀಡಿದ್ದಾರೆ. ಲಾಕ್ಡ್ ಅಪ್ ವಿತ್ ಸನ್ನಿ ಮೂಲಕ ವಿವಿಧ ವಲಯಗಳ ಗಣ್ಯರನ್ನು ತಮ್ಮ ಇನ್ಸ್ಟಾ ಪೇಜ್ನಲ್ಲಿ ಲೈವ್ ಮಾಡಿಸಿದ್ದಾರೆ. ಅಭಿಮಾನಿಗಳಿಗೆ ಮನರಂಜೆ ನೀಡಿದ್ದಾರೆ.
ಉಳಿದ ಸಮಯವನ್ನು ಸಣ್ಣ ಪುಟ್ಟ ಅಡುಗೆ ಮಾಡುವುದು, ಮಕ್ಕಳೊಂದಿಗೆ ಹಾಗೂ ಪತಿ ಡೇನಿಯಲ್ರೊಂದಿಗೆ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕಪ್ಪು ಕುದುರೆ ಮೇಲೆ ಸವಾರಿ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡುವ ಮೂಲಕ ಪಡ್ಡೆ ಹೈಕ್ಳ ನಿದ್ದೆಗೆ ಕೊಳ್ಳಿ ಇಟ್ಟಿದ್ರು. ಹೀಗೆ ಹಲವು ಮಾದಕ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಹಾರ್ಟ್ ನಲ್ಲಿ ಹೂವಿನ ತೋಟವೇ ನಿರ್ಮಿಸಿಕೊಂಡಿದ್ದಾರೆ. ಒಂದಿಲ್ಲೊಂದು ಪೋಸ್ಟ್ ಮೂಲಕ ಲಾಕ್ಡೌನ್ ಸಮಯದಲ್ಲಿ ಸಪ್ಪೆ ಮುಖ ಹೊತ್ತು ಕುಳಿತಿರುವ ಅಭಿಮಾನಿಗಳನ್ನು ಸನ್ನಿ ರಂಜಿಸುತ್ತಿದ್ದಾರೆ.